ಆರ್.ಅಶೋಕ್‌ಗೆ ನನ್ನ ಮನೆ ಬಿಟ್ಟುಕೊಡ್ತೀನಿ: ಡಿಕೆಶಿ ಟಾಂಗ್

Public TV
1 Min Read

ಬೆಂಗಳೂರು: ಆರ್.ಅಶೋಕ್ ಗೆ (R Ashok) ನನ್ನ ಮನೆ ಬಿಟ್ಟುಕೊಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಟಾಂಗ್‌ ನೀಡಿದರು.

ಆರ್. ಅಶೋಕ್ ಗೆ ಸರ್ಕಾರಿ ಬಂಗಲೆ ಕೊಡದ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಶೋಕ್‌ಗೆ ಮನೆ ಕೊಡಿಸೋಣ, ನನ್ನನ್ನೇ ಕೇಳಿದ್ರೆ ನಾನೇ ಮನೆ ಕೊಡಿಸ್ತಿದ್ದೆ ಅಂತಾ ಟಾಂಗ್ ಕೊಟ್ಟರು. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಾಪರ್ಟಿ ಟ್ಯಾಕ್ಸ್ ಕಟ್ಟಲು ಜುಲೈ 31 ಕಡೇ ದಿನ, ಮತ್ತೆ ಅವಧಿ ವಿಸ್ತರಣೆ ಮಾಡಲ್ಲ: ಡಿಕೆಶಿ

ನಾನು ಯಾಕೆ ಆ ಸರ್ಕಾರು ಮನೆ ತಗೊಂಡೆ ಅಂದರೆ ಹಳೆ ನೆನಪಿಗಾಗಿ ತಗೊಂಡೆ. ಹಿಂದೆ ಬಂಗಾರಪ್ಪ ನವರು ಆ ಮನೆಯಲ್ಲಿ ಇದ್ದರು. ನಾನು ವಿದ್ಯಾರ್ಥಿ ಮುಖಂಡನಾಗಿದ್ದಾಗ ಆ ಮರದ ಕೆಳಗೆ ಹೋಗಿ ಕೂರ್ತಿದ್ದೆ. ಆ ನೆನಪಿಗಾಗಿ ನಾನು ಆ ಮನೆ ತಗೊಂಡಿದ್ದೇನೆ. ಈವಾಗ್ಲೂ ನನ್ನನ್ನು ಅಶೋಕ್ ಕೇಳಲಿ, ಮನೆ ಬೇಕಿದ್ರೆ ಬಿಟ್ಟು ಕೊಡ್ತೀನಿ ಅಂದ್ರು.

ಆ ಮನೆಗೆ ಹೋದ್ರೆ ಸಿಎಂ ಆಗ್ತಾರೆಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಅವರಿಗೆ ಒಳ್ಳೆಯದಾಗಲಿ.ಹಿಂದೆ ನನ್ನ ಕ್ಷೇತ್ರಕ್ಕೆ ಬಂದು ಸೋತಿದ್ದರು. ಈಗ ನಾನಿರುವ ಮನೆಗೆ ಬರಲಿ, ಬಿಡ್ತೀನಿ ಎಂದು ವ್ಯಂಗ್ಯವಾಡಿದ್ರು.

Share This Article