ನಮ್ಮ ಸರ್ಕಾರ ದೇವರ ಮನೆಯಿದ್ದಂತೆ, ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ: ಡಿಕೆಶಿ

Public TV
2 Min Read

ಮೈಸೂರು: ನಮ್ಮ ಸರ್ಕಾರ ದೇವರ ಮನೆ ಇದ್ದಂತೆ. ಸಿದ್ದರಾಮಯ್ಯ (Siddaramaiah) ನಮ್ಮೆಲ್ಲರ ನಾಯಕ. 2028ರ ಚುನಾವಣೆಯಲ್ಲಿ ನಮಗೆ ಇದಕ್ಕಿಂತಲೂ ಹೆಚ್ಚಿನ ಶಕ್ತಿ ತುಂಬಿ. ಸಿದ್ದರಾಮಯ್ಯ ಮುಖಂಡತ್ವದಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದರು

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ (Sadhana Samavesha) ಮೈಸೂರು ನಗರ ವ್ಯಾಪ್ತಿಯ 2,658 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಬಳಿಕೆ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಡಿಕೆ ಶಿವಕುಮಾರ್‌, ನಮ್ಮೆಲ್ಲರ ನಾಯಕರಾದ ಸಿದ್ದರಾಮಯ್ಯ ಎನ್ನುತ್ತಲೇ ಮುಖ್ಯಮಂತ್ರಿಗಳಿಗೆ ಸ್ವಾಗತ ಕೋರಿದ್ರು. ಇದನ್ನೂ ಓದಿ: ರೌಡಿಶೀಟರ್ ಕೊಲೆ ಕೇಸ್; ಬಂಧನ ಭೀತಿ – ಕಳೆದೆರಡು ದಿನಗಳಿಂದ ಮನೆಯಲ್ಲಿಲ್ಲ ಬೈರತಿ ಬಸವರಾಜ್

ಮುಂದುವರಿದು.. ಕಮಲ ಕೆರೆಯಲ್ಲಿ ಇದ್ದರೆ ಚೆನ್ನ, ತೆನೆ ಹೊಲದಲ್ಲಿ ಇದ್ದರೆ ಚೆನ್ನ. ದಾನ ಧರ್ಮ ಮಾಡುವ ʻಕೈʼ ಅಧಿಕಾರದಲ್ಲಿ ಚೆನ್ನ ಎಂದು ಚುನಾವಣೆ ವೇಳೆ ಹೇಳಿದ್ದೆ. ಈ ಹಸ್ತ ಈಗ ವಿರೋಧಿಗಳ ಬಾಯಿ ಮುಚ್ಚಿಸಿದೆ. ಸತ್ಯಕ್ಕೂ ಸುಳ್ಳಿಗೂ ವ್ಯತ್ಯಾಸ ಏನೂ ಗೊತ್ತಾ? ಕಣ್ಣಲ್ಲಿ ನೋಡಿದ್ದೆಲ್ಲಾ ಸತ್ಯ. ಕಿವಿಯಲ್ಲಿ ಕೇಳಿದ್ದೆಲ್ಲಾ ಸುಳ್ಳು. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ನೀವು ನಿಮ್ಮ ಕಣ್ಣಲ್ಲಿ ನೋಡುತ್ತಿದ್ದೀರಿ ಇದೇ ಸತ್ಯ. ನಮ್ಮ ಗ್ಯಾರಂಟಿ ಟೀಕೆ ಮಾಡುತ್ತಿದ್ದ ಬಿಜೆಪಿ, ಈಗ ಎಲ್ಲಾ ರಾಜ್ಯಗಳಲ್ಲೂ ಗ್ಯಾರಂಟಿ ಯೋಜನೆ ಪ್ರಕಟಿಸುತ್ತಿದ್ದಾರೆ ಎಂದು ಹೇಳಿದರು.

ಈ ಹಸ್ತ ವಿರೋಧಿಗಳ ಬಾಯಿ ಮುಚ್ಚಿಸಿದೆ. ಈ ಹಸ್ತ ರೈತರಿಗೆ, ಮಹಿಳೆಯರಿಗೆ ಶಕ್ತಿ ತುಂಬಿದೆ. ನಮ್ಮ ಸರ್ಕಾರ ದೇವರ ಮನೆ ಇದ್ದಂತೆ. ಕಾಂಗ್ರೆಸ್ ಸರ್ಕಾರ (Congress Government) ಬಂದ್ರೆ ಬರಗಾಲ ಅಂತಿದ್ದರು. ಈಗ ನೋಡ್ತಿಲ್ವಾ ನಾಡಿನ ಎಲ್ಲಾ ಜಲಾಶಯ ತುಂಬಿವೆ. ಬಿಜೆಪಿ, ಜನತಾದಳಕ್ಕೆ ಸವಾಲು ಹಾಕ್ತಿನಿ. ಬಡವರ ಬದುಕಿಗೆ ಬೆಳಕು ತಂದ ಒಂದು ಕಾರ್ಯಕ್ರಮ ಮಾಡಿದ್ದರೆ ಹೇಳಲಿ ಎಂದು ಒತ್ತಾಯಿಸಿದ್ರು. ಇದನ್ನೂ ಓದಿ: ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

ಟೀಕೆಗೆ ನಮಗೆ ಬೇಜಾರಿಲ್ಲ. ನಿಂದಕರು ಇರಬೇಕು. ನಿಂದಕರು ಇದ್ದರೆ ನಾವು ಎಚ್ಚರದಿಂದ ಇರುತ್ತೇವೆ. ನಿಂದಕರು ನಿಂದನೆ ಮಾಡುತ್ತಿರಲಿ ನಾವು ನಡೆ ಮುಂದೆ ನಡೆ ಮುಂದೆ ಅಂತಾ ಮುನ್ನೆಡೆಯುತ್ತೇವೆ. 2028ಕ್ಕೆ ಇದಕ್ಕಿಂತ ಹೆಚ್ಚಿನ ಶಕ್ತಿ ನಮಗೆ ತುಂಬಿ. ಸಿದ್ದರಾಮಯ್ಯ ಮುಖಂಡತ್ವದಲ್ಲಿ, ಖರ್ಗೆ ಅವರ ಮಾರ್ಗದರ್ಶನದಲ್ಲಿ ನಾವು ಮುನ್ನಡೆಯುತ್ತೇವೆ. ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಉಪಸ್ಥಿತರಿದ್ದರು. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

Share This Article