ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿ ಬೇಡ ಎಂದು ಸುಮ್ಮನಿದ್ದೇನೆ: ಡಿಕೆಶಿ

Public TV
2 Min Read

– ಸಿಪಿವೈ ಪುತ್ರಿ ನಿಶಾ ಭೇಟಿ ವಿಚಾರಕ್ಕೆ ಡಿಸಿಎಂ ಪ್ರತಿಕ್ರಿಯೆ

ಬೆಂಗಳೂರು: ಸಿ.ಪಿ ಯೋಗೇಶ್ವರ್ (C.P Yogeshwar) ಪುತ್ರಿ ನಿಶಾ (Nisha Yogeshwar) ನನ್ನ ಹಾಗೂ ನನ್ನ ತಮ್ಮನನ್ನು ಭೇಟಿ ಮಾಡಿದ್ದರು. ಅಪ್ಪ ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಮಗಳ ವಿಚಾರ ಸರಿ ಹೋಗಬಹುದು. ಅವಳು ಇನ್ನೂ ಮದುವೆಯಾಗಬೇಕು, ತಂದೆ ಹಾಲು ಎರೆಯಬೇಕು, ಅಕ್ಷತೆ ಕಾಳು ಹಾಕಬೇಕು. ನನಗೆ ಅವಳ ಬಗ್ಗೆ ಹಾಗೂ ಆರ್ಥಿಕ ಪರಿಸ್ಥಿತಿ ಬಗ್ಗೆ ಎಲ್ಲಾ ಗೊತ್ತು ಅವರ ಅಮ್ಮನೂ ನನಗೆ ಪರಿಚಯವಿದ್ದಾರೆ. ಯೋಗೇಶ್ವರ್ ಅವರ ಈಗಿನ ಸಂಸಾರದ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಮಾಜದಲ್ಲಿ ಬದಲಾವಣೆ ತರಲು ಕಾಂಗ್ರೆಸ್‌ ಸೇರಲು ಚಿಂತನೆ: ನಿಶಾ ಯೋಗೇಶ್ವರ್‌

ಆ ಹೆಣ್ಣು ಮಗಳು ಬಹಳ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಸೇರುತ್ತೇನೆ ಎಂದರೆ ನಮ್ಮ ಪಕ್ಷದ ಸ್ಥಳಿಯ ನಾಯಕರ ಜೊತೆ ಮಾತನಾಡುತ್ತೇನೆ. ನಿಶಾ ಯೋಗೇಶ್ವರ್ ಧೈರ್ಯವಂತ ಹೆಣ್ಣು ಮಗಳು, ಏನೋ ಧೈರ್ಯ ಮಾಡಿದ್ದಾಳೆ. ನಾಳೆ ಜನ ಅಪ್ಪ ಮಗಳನ್ನು ಯಾಕೆ ದೂರ ಮಾಡಿದೆ ಎಂದು ನನ್ನನ್ನು ಪ್ರಶ್ನೆ ಮಾಡ್ತಾರೆ. ಅದಕ್ಕಾಗಿ ನಾನು ಸುಮ್ಮನಿದ್ದೇನೆ. ಮದುವೆಯಾಗಿ ಅವರದೇ ಕುಟುಂಬ ಇದ್ದಿದ್ದರೆ ವಿಚಾರ ಬೇರೆಯಾಗುತ್ತಿತ್ತು ಎಂದಿದ್ದಾರೆ.

ರಾಜರಾಜೇಶ್ವರಿಗೆ ಹೋಗಿ ಒಂದು ಕೈ ಮುಗಿಯಬೇಕು. ಅಲ್ಲಿ ನಮ್ಮ ಅಭ್ಯರ್ಥಿ ಬಹಳ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಡಿ.ಕೆ ಸುರೇಶ್ ಮಾಡಿದ ಕೆಲಸ ಜನರಿಗೆ ಈಗ ಅರ್ಥವಾಗಿದೆ. ಮಾನವೀಯತೆ, ನಮ್ಮ ತಮ್ಮ ಎನ್ನುವುದನ್ನು ಪಕ್ಕಕ್ಕೆ ಇಡಿ. ಕೋವಿಡ್ ಸಂದರ್ಭದಲ್ಲಿ ಯಾರು ಆಚೆಗೆ ಬರಲಿಲ್ಲ. ಕುಮಾರಸ್ವಾಮಿ ಮನೆಯಿಂದ ಹೊರಗೆ ಬರಲಿಲ್ಲ. ಡಿ.ಕೆ ಸುರೇಶ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ತರಕಾರಿಗೆ ಬೆಲೆ ಸಿಗಬೇಕು ಎಂದು ಹೋರಾಡಿದ್ದರು. ಮನೆ ಮನೆಗೆ ಹೋಗಿ ಸುರೇಶ್ ಕೆಲಸ ಮಾಡಿದ್ದರು. ಈಗ ಬಿಜೆಪಿ ಗೊಂದಲದ ಗೂಡಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು, ಆಗ ಏನು ಕೆಲಸ ಮಾಡಿದ್ರು? ಕೆಲಸ ಮಾಡದವರಿಗೆ ಬಿಜೆಪಿಯಲ್ಲಿ ಟಿಕೆಟ್ ಸಿಕ್ಕಿಲ್ಲ. ಏಕಾಏಕಿ ಡ್ರಾಪ್ ಮಾಡಿ ವೀಕ್ ಸ್ಟ್ಯಾಟರ್ಜಿಯನ್ನು ಬಿಜೆಪಿ ಮಾಡಿದೆ. ನಾವು ಯುವಕರಿಗೆ ಮಣೆ ಹಾಕಿದ್ದೇವೆ. ಬಿಜೆಪಿ ಚನ್ನಪಟ್ಟಣದಲ್ಲಿ ರೋಡ್ ಶೋ ಮಾಡಲು ಮುಂದಾಗಿದೆ. ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಒಂದು ಮಾಡಲು ರೋಡ್ ಶೋ ಮಾಡುತ್ತಿದ್ದಾರೆ. ದಿನಪ್ರತಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಕಾರ್ಯಕರ್ತರ ಒಂದಾಗಿ ಯಾಕೆ ಸಭೆ ಮಾಡಲಿಲ್ಲ. ಇವರಿಬ್ಬರ ಮೈತ್ರಿ ನೋಡಿ ನಾಚಿಕೆಯಾಗುತ್ತಿದೆ. ಆ ದಿನ ಸುಮಲತಾ ಮನೆಗೆ ಹೋಗಬೇಡ ಎಂದವರು ಇವತ್ತು ಸುಮಲತಾ ಮನೆಗೆ ಹೋಗುತ್ತಿದ್ದಾರೆ. ಮೈತ್ರಿ ಸರ್ಕಾರ ತೆಗೆದವರ ಜೊತೆಗೆ ತಬ್ಬಾಡುತ್ತಿದ್ದಾರೆ. ನಾನು ಯಾವ ಅನ್ಯಾಯ ಮಾಡಿದ್ದೆ ಕುಮಾರಸ್ವಾಮಿಗೆ? ನಾನು ವಿಷ ಹಾಕಿದ್ದೆ ಎನ್ನುತ್ತಿದ್ದಾರೆ. ಬೆನ್ನಿಗೆ ಚೂರಿ ಹಾಕಿದೆ ಎನ್ನುತ್ತಿದ್ದಾರೆ. ಸರ್ಕಾರ ಉಳಿಸಲು ನಾನು ಮಳೆ-ಬಿಸಿಲಲ್ಲಿ ನಿಂತು ಹೋರಾಡಿದ್ದೆ ಎಂದಿದ್ದಾರೆ.

ಮಹಿಳೆ ಅಡುಗೆ ಮನೆಗೆ ಸೀಮಿತ ಎಂಬ ಶಾಮನೂರು ಹೇಳಿಕೆ ವಿಚಾರವಾಗಿ, ಹೆಣ್ಣು ಕುಟುಂಬದ ಕಣ್ಣು, ಪಾಪ ಅವರಿಗೆ ವಯಸ್ಸಾಗಿದೆ. ಆರು ಜನ ಮಹಿಳೆಯರಿಗೆ ನಾವು ಟಿಕೆಟ್ ಕೊಟ್ಟಿದ್ದೇವೆ. ಹೆಣ್ಣು ಮಕ್ಕಳಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ. ಶಾಮನೂರು ಹೇಳಿಕೆ ಖಂಡನೀಯ ಎಂದಿದ್ದಾರೆ. ಇದನ್ನೂ ಓದಿ: ಬಹುಶ: ಕೇಜ್ರಿವಾಲ್‌ ಹಿಂದೆ ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು, ಅಂದು ಹುತಾತ್ಮರಾಗಿದ್ದ ಅವರು ಈಗಲೂ ಹೋರಾಡುತ್ತಿದ್ದಾರೆ: ಸುನಿತಾ ಕೇಜ್ರಿವಾಲ್‌

Share This Article