ಸುರ್ಜೇವಾಲಾ ರಾಜ್ಯ ಭೇಟಿಗೂ ಮುನ್ನವೇ ಕುತೂಹಲ ಕೆರಳಿಸಿದ ಮಲ್ಲಿಕಾರ್ಜುನ ಖರ್ಗೆ – ಡಿಕೆಶಿ ಭೇಟಿ

Public TV
2 Min Read

ಬೆಂಗಳೂರು: ಅನುದಾನ ಸಿಗ್ತಿಲ್ಲ, ಸಚಿವರು ಕಷ್ಟ ಕೇಳಲ್ಲ ಅಂತ ಕೆಲ ಕೈ (Congress) ಶಾಸಕರು ಗೋಳಾಟ. ಆದ್ರೆ ಕೆಲವು ಸಚಿವರು, ಶಾಸಕರಿಗೆ ಸಿದ್ದರಾಮಯ್ಯ (Siddaramaiah) ಪೂರ್ಣಾವಧಿ ಸಿಎಂ ಆಗಿರ್ತಾರೆ ಎಂಬುದಷ್ಟೇ ಸತ್ಯ ಎಂಬ ಹಠ. ಈ ನಡುವೆ ಮೌನವೇ ಚದುರಂಗ ರಾಜಕೀಯದ ಲಕ್ಷಣ ಎಂಬ ಟ್ರಿಕ್ಸ್ ಶುರು ಮಾಡಿದ್ದಾರೆ ಡಿಕೆಶಿ. ಇಷ್ಟೆಲ್ಲ ಕದನ ಕುತೂಹಲವಾಗಿರುವ ರಾಜ್ಯ ಕಾಂಗ್ರೆಸ್‌ಗೆ ಅಲ್ಪ ವಿರಾಮದ ಗೆರೆ ಎಳೆಯಲು ಹೈಕಮಾಂಡ್‌ಗೆ ದೊಡ್ಡ ತಲೆನೋವು ಶುರುವಾಗಿದೆ. ‌

ಕದನ.. ಪವರ್ ಶೇರ್ ವಾರ್.. ಇದು ಕಾಂಗ್ರೆಸ್ ಹೈಕಮಾಂಡ್‌ಗೆ ಧರ್ಮಸಂಕಟ ತಂದೊಡ್ಡಿದೆ. ಸಮಸ್ಯೆ ಬಗೆಹರಿಸೋದು, ವಾರ್ನ್ ಮಾಡೋದಷ್ಟೇ ಹೈಕಮಾಂಡ್ ಮುಂದಿರುವ ಆಪ್ಷನ್. ಹಾಗಾಗಿ ಸೋಮವಾರ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ರಾಜ್ಯಕ್ಕೆ ಎಂಟ್ರಿ ಕೊಡ್ತಿದ್ದಾರೆ. ಬೆಳಗ್ಗೆ 11ಗಂಟೆಗೆ ಬೆಂಗಳೂರಿಗೆ (Bengaluru) ಆಗಮಿಸಲಿರುವ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮಧ್ಯಾಹ್ನ 3 ಗಂಟೆ ಬಳಿಕ ಶಾಸಕರಿಗೆ ಸಮಯ ಮೀಸಲಿಟ್ಟಿದ್ದಾರೆ. ಆದ್ರೆ ಸುರ್ಜೇವಾಲಾ ಅವರು ರಾಜ್ಯಕ್ಕೆ ಭೇಟಿ ನೀಡುವ ಮುನ್ನವೇ ಡಿಸಿಎಂ ಡಿಕೆ ಶಿವಕುಮಾರ್‌ ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾಗಿದ್ದಾರೆ. ಬೆಂಗಳೂರಿನ ಖರ್ಗೆ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜಕೀಯ ಕೋಲಾಹಲದ ನಡುವೆ ಇವರಿಬ್ಬರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಇದು ʻಸೆಪ್ಟೆಂಬರ್‌ ಕ್ರಾಂತಿʼಗೆ ಪುಷ್ಠಿ ನೀಡಿದಂತಾಗಿದೆ.

Randeep Singh Surjewala

ಇನ್ನೂ ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ಕ್ರಾಂತಿ ಭವಿಷ್ಯ ಸ್ಫೋಟಗೊಂಡಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಮಹತ್ವದ ಚರ್ಚೆ ಈ ಸೆಪ್ಟೆಂಬರ್ ಕ್ರಾಂತಿ. ಸೆಪ್ಟೆಂಬರ್ ಸ್ಫೋಟಕ್ಕೆ ಇನ್ನೆರಡು ತಿಂಗಳಷ್ಟೇ ಬಾಕಿ. ಹಿರಿಯ ಸಚಿವ ಕೆ.ಎನ್ ರಾಜಣ್ಣ ನೀಡಿರುವ ಈ ಹೇಳಿಕೆ ಸದ್ಯ ರಾಜಕಾರಣದಲ್ಲಿ ನಾನಾ ಆಯಾಮದಲ್ಲಿ ವಿಶ್ಲೇಷಣೆಗೆ ಕಾರಣವಾಗ್ತಿದೆ. ಸೆಪ್ಟೆಂಬರ್ ಕ್ರಾಂತಿಗೆ ಸಚಿವರು, ಶಾಸಕರು ತಮ್ಮದೇ ಆದ ಧಾಟಿಯಲ್ಲಿ ಸಮರ್ಥನೆ ಕೊಡ್ತಿದ್ದಾರೆ. ಅಷ್ಟಕ್ಕೂ ಸೆಪ್ಟೆಂಬರ್ ಕ್ರಾಂತಿಯನ್ನು ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದು ಸದ್ಯದ ಕುತೂಹಲ.

ಇನ್ನು ಬಿಜೆಪಿ ನಾಯಕರು ಸೆಪ್ಟೆಂಬರ್ ಕ್ರಾಂತಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಿದ್ದಾರೆ. ವಿಪಕ್ಷ ನಾಯಕ ಅಶೋಕ್, ರಾಜಣ್ಣಕ್ಕಿಂತ ಮೊದ್ಲೇ ಹೇಳಿದ್ದೇ. ಕಾಂಗ್ರೆಸ್‌ನೊಳಗೆ ಕ್ಷಿಪ್ರ ಕ್ರಾಂತಿ ಆಗೋದು ಶತಸಿದ್ಧ ಎಂದಿದ್ದಾರೆ. ಇನ್ನು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಗೋವಿಂದ್ಕಾರಜೋಳ 2026ರಲ್ಲೇ ಎಲೆಕ್ಷನ್ ನಡೆಯುತ್ತೆ ಅಂತ ಭವಿಷ್ಯ ನುಡಿದಿದ್ದಾರೆ. ಇನ್ನು ಅಶೋಕ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಅಶೋಕ್ ಭವಿಷ್ಯ, ಜ್ಯೋತಿಷಿ ಕಲಿತಿದ್ರೆ ನನಗೆ ಟೈಂ ಕೊಡ್ಸಿ, ನನಗೂ ಕೇಳೋದು ಇದೆ, ಅವರನ್ನ ಭೇಟಿ ಮಾಡ್ತೀನಿ ಅಂತ ಡಿಕೆಶಿ ವ್ಯಂಗ್ಯವಾಡಿದ್ದಾರೆ. ಇನ್ನುಳಿದ ಸಚಿವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Share This Article