ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಯುವ ಮೊದಲು ಡಿಕೆಶಿಯಿಂದ ಶಕ್ತಿಪ್ರದರ್ಶನ!

Public TV
1 Min Read

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೆಪಿಸಿಸಿ ಅಧ್ಯಕ್ಷರಾಗಿ 5 ವರ್ಷ ಪೂರೈಸಿರುವ ಸಂಭ್ರಮಕ್ಕೆ ಮಧ್ಯ ಕರ್ನಾಟಕದಲ್ಲಿ ಬೃಹತ್ ಸಮಾವೇಶ ನಡೆಸಲು ಪ್ಲ್ಯಾನ್‌ ನಡೆದಿದೆ.

ನಾನು ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ ಎಂದು ಡಿಕೆ ಶಿವಕುಮಾರ್‌ ಹೇಳಿದ್ದು ಕಾಂಗ್ರೆಸ್‌ನಲ್ಲಿ (Congress) ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಈ ಚರ್ಚೆ ನಡೆಯುತ್ತಿರುವಾಗಲೇ ಡಿಕೆ ಶಿವಕುಮಾರ್‌ ಅಧ್ಯಕ್ಷ ಪಟ್ಟದಿಂದ ಇಳಿಯುವ ಮೊದಲು ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.  ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ: ಪವರ್ ಶೇರ್ ಗೇಮ್‌ಗೆ ಡಿಕೆಶಿ ಚಾಲನೆ

 

ಶನಿವಾರ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲೂ ಕೆಲ ನಾಯಕರು ಪ್ರಸ್ತಾಪಿಸಿದ್ದಾರೆ ಎಂಬುದು ಮೂಲಗಳ ಮಾಹಿತಿ. ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಬೃಹತ್ ಸಮಾವಶಕ್ಕೆ ಪ್ಲ್ಯಾನ್‌ ಮಾಡಲಾಗಿದೆ. ಮಧ್ಯ ಕರ್ನಾಟಕದಲ್ಲಿ ಆಯೋಜಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಸಾಧ್ಯವಾಗುತ್ತದೆ ಎಂಬ ಲೆಕ್ಕಾಚಾರವನ್ನು ಹಾಕಲಾಗಿದೆ.

ಏಪ್ರಿಲ್ ಅಥವಾ ಮೇನಲ್ಲಿ ಶಕ್ತಿ ಪ್ರದರ್ಶನಕ್ಕೆ ಡಿಕೆಶಿ ಆಪ್ತರು ಮುಂದಾಗಿದ್ದಾರೆ. ಆದರೆ ಬೆಂಬಲಿಗರು, ಆಪ್ತರ ಪ್ಲ್ಯಾನ್‌ಗೆ ಇನ್ನೂ ಡಿಕೆಶಿಯಿಂದ ಸಿಕ್ಕಿಲ್ಲ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎನ್ನಲಾಗಿದೆ.

ಎಐಸಿಸಿಯಿಂದ ಅನುಮತಿ ಪಡೆದು ದೊಡ್ಡ ಸಮಾವೇಶ ನಡೆಸುವ ಪ್ರಸ್ತಾಪವಿದೆ. ಪವರ್‌ಶೇರ್‌ಗೂ ಮುನ್ನ ಶಕ್ತಿಪ್ರದರ್ಶನಕ್ಕೆ ಎಐಸಿಸಿ ಅವಕಾಶ ಕೊಡುತ್ತಾ ಎಂಬುದನ್ನ ಕಾದುನೋಡಬೇಕಿದೆ.

Share This Article