ತರಾತುರಿಯಲ್ಲಿ ದೆಹಲಿಗೆ ತೆರಳಿದ ಡಿಕೆಶಿ – ಸಿಎಂ ಮುಜುಗರದ ಹೇಳಿಕೆಗಳಿಗೆ ಬೇಸತ್ರಾ ಡಿಸಿಎಂ?

Public TV
1 Min Read

ಬೆಂಗಳೂರು: ಮೈಸೂರಿನಲ್ಲಿ (Mysuru) ನಡೆಯುತ್ತಿದ್ದ ಸಮಾವೇಶದಿಂದ ದಿಢೀರ್ ನಿರ್ಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತರಾತುರಿಯಲ್ಲಿ ದೆಹಲಿಗೆ (New Delhi) ಪ್ರಯಾಣ ಬೆಳೆಸಿದ್ದಾರೆ.

ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಪ್ರಯಾಣ ಎನ್ನಲಾಗಿದೆ. ಮೈಸೂರಿನಲ್ಲಿ ಕಾರ್ಯಕ್ರಮ ಅರ್ಧಕ್ಕೆ ಬಿಟ್ಟು ದೆಹಲಿಗೆ ಹೊರಟ ಡಿಕೆಶಿ ನಡೆ ತೀವ್ರ ಕುತೂಹಲ ಮೂಡಿಸಿದೆ. ಇದನ್ನೂ ಓದಿ:  ಹಾಸನ | 2 ಕಾರುಗಳ ನಡುವೆ ಭೀಕರ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

ಇತ್ತೀಚಿಗಷ್ಟೇ ಡಿಕೆಶಿ ದಿಢೀರನೇ ದೆಹಲಿಗೆ ಹೋಗಿದ್ದರು. ಈಗ ಮತ್ತೆ ತರಾತುರಿಯಲ್ಲಿ ಬೆಂಗಳೂರಿನಿಂದ (Bengaluru) ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಿಎಂ ಅವರ ಪದೇ ಪದೇ ಮುಜುಗರದ ಹೇಳಿಕೆಗಳಿಗೆ ಡಿಸಿಎಂ ಡಿಕೆಶಿ ಬೇಸತ್ತು ದೆಹಲಿಗೆ ತೆರಳಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಖಾಸಗಿ ಕೆಲಸದ ನೆಪದಲ್ಲಿ ಡಿಕೆಶಿ ದೆಹಲಿಗೆ ಭೇಟಿಯ ರಹಸ್ಯ ಕಾಯ್ದಿಟ್ಟುಕೊಂಡಿದ್ದಾರೆ. ಡಿಕೆಶಿ ದೆಹಲಿ ಭೇಟಿ ಹಿಂದೆ ಯಾವ ಅಸಮಧಾನದ ಹೊಗೆ ಇದೆ ಎಂದು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಸದ್ಯದಲ್ಲೇ ಅರುಣ್ ರಾಜಕೀಯ ಪ್ರವೇಶ ಶತಸಿದ್ಧ – ಪುತ್ರನ ರಾಜಕೀಯ ಭವಿಷ್ಯ ನುಡಿದ ಸೋಮಣ್ಣ

ಜುಲೈ 11 ಹಾಗೂ 12ರಂದು ಶಿರಡಿಗೆ ತೆರಳಿದ್ದ ಡಿಕೆಶಿ ದಿಢೀರ್ ದೆಹಲಿಗೆ ಭೇಟಿ ಕೊಟ್ಟಿದ್ದರು. ಇದೀಗ ಎಂಟೇ ದಿನಗಳ ಅಂತರದಲ್ಲಿ ಮತ್ತೆ ಏಕಾಏಕಿ ದೆಹಲಿಗೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

Share This Article