ಮುಸ್ಲಿಮರಿಗೆ ಮಾನಸಿಕ ಹಿಂಸೆ ಕೊಡ್ತಿದ್ದಾರೆ- ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

Public TV
1 Min Read

ಬೆಂಗಳೂರು: ಮುಸ್ಲಿನರು ಓಡಿ ಹೋಗಬೇಕು ಅಂತ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ನೇಹಾ ಹಿರೇಮಠ ಹತ್ಯೆ (Neha Hiremath) ಖಂಡಿಸಿ ಬಿಜೆಪಿ ಪ್ರತಿಭಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಇವರ ಕೈಯಲ್ಲಿ ಸಂವಿಧಾನ ಬದಲಾವಣೆ ಮಾಡೋಕೆ ಆಗುತ್ತಾ..?. ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ಹಾಗಂತ ಕ್ರಿಮಿನಲ್ ಗಳಿಗೆ ಅಂಥಹ ಪ್ರಕರಣಗಳಿಗೆ ನಾವು ರಕ್ಷಣೆ ಕೊಡಲ್ಲ. ಯಾರಿಗೂ ನಾವು ಅಂತಹ ಘಟನೆಗಳಿಗೆ ಅವಕಾಶ ಕೊಡಲ್ಲ. ಈ ರಾಜ್ಯ ಶಾಂತಿಯಿಂದ ಇದೆ ಎಂದರು.

ಇದೇ ವೇಳೆ ಬಿಜೆಪಿ (BJP) ಜಾಹೀರಾತು ವಿಚಾರಕ್ಕೆ ಪ್ರತಿಕ್ರಿಯಿಸಿ, ಸದ್ಯ ಅಷ್ಟು ಎಚ್ಚರಿಕೆ ಆಗಿದೆಯಲ್ವಾ ಅಷ್ಟು ಸಾಕು. ಖಾಲಿ ಚೊಂಬು ಇಟ್ಟುಕೊಂಡು ಗೌರವಾನ್ವಿತ ದೇವೇಗೌಡರು ಮೋದಿಗೆ ಹೇಳಿದ್ದಾರೆ. ನಿಮ್ಮಿಂದ ಇಂಥ ಅನ್ಯಾಯ ಆಯ್ತು. ನೀವು ನಮಗೆ ಚೊಂಬು ಕೊಟ್ಬಿಟ್ರಿ, ನಮಗೆ ಮಾತಾಡೋಕೆ ಶಕ್ತಿ ಇಲ್ಲದ ಹಾಗೆ ಆಗಿದೆ ಅಂದಿದ್ದಾರೆ. ಸಾರ್ವಜನಿಕವಾಗಿ ಏನು ಬೇಕಾದ್ರೂ ಮಾತಾಡಲಿ. ಆದರೆ ಹಿಂದೆಯಲ್ಲ ಕುಮಾರಸ್ವಾಮಿ ದೇವೇಗೌಡರು ಅವರೇ ಅನ್ಯಾಯ ಅಗಿದೆ ಅಂತ ಭಾಷಣ ಮಾಡಿದ್ರಲ್ವಾ?. ನಾವು ಈಗ ಮೋದಿಗೆ ಪ್ರಶ್ನೆ ಕೇಳಿದ್ದೇವೆ ಅಷ್ಟೆ. ಆದರೆ ಜನ ಎಲ್ಲದನ್ನೂ ನೋಡ್ತಾ ಇದ್ದಾರೆ ಅವರೇ ಡಿಸೈಡ್ ಮಾಡ್ತಾರೆ. ಪ್ರಜ್ಞೆ ನಾಗರೀಕರಿಗೆ ಇದೆ ಎಂದರು.

ಸಿದ್ದರಾಮಯ್ಯ, ನಾನು ಕಾಂಗ್ರೆಸ್ ನಾಯಕರು 15 ಲಕ್ಷ ಚೊಂಬಲ್ಲಿ ಬಂದಿದ್ಯಾ ಅಂತ ಪ್ರಶ್ನೆ ಮಾಡ್ತಾ ಇದ್ದೇವೆ. ನೌಕರಿ ಕೊಟ್ಟಿದ್ದಾರಾ..? ಏನು ಮಾಡಿದ್ದಾರೆ ಅವರೇ ಹೇಳಲಿ. ಈಗ ಕರ್ನಾಟಕಕ್ಕೆ ಖಾಲಿ ಚೊಂಬು ತಾನೇ ಇವರು ಕೊಟ್ಟಿರೋದು. ಕನ್ನಡ ಸ್ವಾಭಿಮಾನ ಎತ್ತಿ ಹಿಡಿದವರು ನಾವು.ನಮ್ಮ ಹಕ್ಕು ಕೇಳಿರುವವರು ನಾವು ಎಂದು ವಾಗ್ದಾಳಿ ನಡೆಸಿದರು.

Share This Article