ಅನಂತ್ ಕುಮಾರ್‌ಗೆ ಹೆಚ್ಚು ಕಮ್ಮಿ ಆಗಿದೆ, ಜನರೇ ಬುದ್ಧಿ ಕಲಿಸ್ತಾರೆ: ಡಿಕೆಶಿ ತಿರುಗೇಟು

Public TV
1 Min Read

ಬೆಂಗಳೂರು: ಕಾಂಗ್ರೆಸ್ (Congress) ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ (Anantkumar Hegde) ವಿರುದ್ಧ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK ShivaKumar) ಕಿಡಿಕಾರಿದ್ದಾರೆ.

ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಅನಂತ್ ಕುಮಾರ್ ಹೆಗ್ಡೆಗೆ ಪಾಪ ಹೆಚ್ಚು ಕಮ್ಮಿ ಆಗಿದೆ. ಪಾಪ ಅವರು ಇಷ್ಟು ದಿನ ಸ್ವಲ್ಪ ರೆಸ್ಟ್‍ನಲ್ಲಿ ಇದ್ದರು. ಅವರಿಗೆ ಜನರೇ ಇದಕ್ಕೆ ಉತ್ತರ ಕೊಡ್ತಾರೆ ಅಂತ ತಿರುಗೇಟು ನೀಡಿದರು. ಇದನ್ನೂ ಓದಿ: 55 ವರ್ಷಗಳ ಬಾಂಧವ್ಯ ಅಂತ್ಯಗೊಳಿಸಿದ್ದೇನೆ – ಕಾಂಗ್ರೆಸ್‌ಗೆ ಮಿಲಿಂದ್‌ ದಿಯೋರಾ ಗುಡ್‌ಬೈ

ಹೆಗ್ಡೆ ಹೇಳಿದ್ದೇನು..?: ಶಿರಸಿಯ ಸಿಪಿ ಬಜಾರ್ ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ. ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ ರಕ್ತವೇ ಅಲ್ಲ ಎಂದು ಕೆಂಡ ಕಾರಿದ್ದರು.

ಇಂದಿಗೂ ಮೂರ್ಖ ರಾಮಯ್ಯನಂಥವರು ಹಿಂದೂ ಸಮಾಜ ಒಡೆಯುತ್ತಿದ್ದಾರೆ. ಶತಮಾನಗಳು ಕಳೆದ ಬಳಿಕವೂ ಹಿಂದೂ ಸಮಾಜ ಒಡೆಯುವ ಕೆಲಸ ಆಗಬಾರದು. ಮತ್ತೆ ನಾವೇ ಪ್ರಯತ್ನಿಸಿದರೂ ಸಮಾಜ ಒಡೆಯದಂತೆ ಸದೃಢಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೆ ಅಲ್ಲ, ಅವರು ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಆದ್ರೆ ಸಿದ್ದರಾಮಯ್ಯ (Siddaramaiah) ನಮ್ಮ ವಿರೋಧಿ. ಅಲ್ಪಸಂಖ್ಯಾತರ ವೋಟಿಗೆ ಹರಾಜಾಗಿ ಹೋದವರು ನಮ್ಮ ವಿರೋಧಿಗಳು ಎಂದು ಅಸಮಾಧಾನ ಹೊರಹಾಕಿದ್ದರು.

ಕೆಲವರು ರಾಮಮಂದಿರ ಆಮಂತ್ರಣ ನಮಗೆ ಬಂದಿಲ್ಲ ಅಂದರು. ಬಂದಮೇಲೆ ಕಾರ್ಯಕ್ರಮಕ್ಕೆ ಹೋಗಲ್ಲ ಅಂದರು. ಈಗ ಹೋಗ್ತೀನಿ ಅಂತಿದ್ದಾರೆ. ಇದು ಹಿಂದೂ ಸಮಾಜದ ಧಮ್ಮು, ತಾಕತ್ತು ಎಂದು ಟಾಂಗ್ ಕೊಟ್ಟಿದ್ದರು.

Share This Article