ಎಲ್ಲಾ ಫ್ರೀ ಕೊಟ್ಟರೆ, ಸರ್ಕಾರ ಹೆಂಗೆ ನಡೀಬೇಕು? – ಶೀಘ್ರವೇ ನೀರು, ವಿದ್ಯುತ್‌ ದರ ಏರಿಕೆ ಸುಳಿವು ಕೊಟ್ಟ ಡಿಕೆಶಿ

Public TV
1 Min Read

ಬೆಂಗಳೂರು: ಪಂಚ ಗ್ಯಾರಂಟಿಗಳ (Congress Guarantee) ಮೂಲಕವೇ ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದೆ. ಆದ್ರೆ, ಇದೀಗ ಉಚಿತಗಳ ಬಗ್ಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಬೇಸರದ ಮಾತುಗಳನ್ನು ಆಡಿರೋದು ಚರ್ಚೆಗೆ ಗ್ರಾಸವಾಗಿದೆ.

ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು ಎಂದು ಪ್ರಶ್ನಿಸಿದ್ದಾರೆ. ಜಲಮಂಡಳಿ ಸಭೆ ಬಳಿಕ ಮಾತಾಡಿದ ಅವರು, ಇನ್ಮೇಲೆ ಕಾವೇರಿ ನೀರನ್ನು ಫ್ರೀಯಾಗಿ ಕೊಡೋಕೆ ಆಗಲ್ಲ.. ಒಂದು ಪೈಸೆಯಾದರೂ ಬಿಲ್ ಕಟ್ಟಬೇಕು. ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ. ಹೀಗಾಗಿ ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ ಅಂತ ಕೇಳಿದ್ದಾರೆ.

ಈ ಮೂಲಕ ನೀರಿನ ದರ ಹೆಚ್ಚಿಸುವ ಸುಳಿವು ನೀಡಿದ್ದಾರೆ. ಇನ್ನೂ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆಯೂ ಕಂಡುಬರ್ತಿದೆ. ವಿದ್ಯುತ್ ದರ ಏರಿಕೆಗೆ 5 ವಿದ್ಯುತ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. 3 ವರ್ಷದ ದರ ಏರಿಕೆಯನ್ನು ಈಗಲೇ ಪ್ರಕಟಿಸಿ ಎಂದು ಮೊರೆ ಇಟ್ಟಿವೆ. ಪ್ರತಿ ಯೂನಿಟ್‌ಗೆ 2025-26ರ ಸಾಲಿನಲ್ಲಿ 67 ಪೈಸೆ, 2026-27ರಲ್ಲಿ 74 ಪೈಸೆ ಮತ್ತು 2027-28ರಲ್ಲಿ 91 ಪೈಸೆ ಹೆಚ್ಚಳಕ್ಕೆ ಈಗಲೇ ಅನುಮೋದನೆ ನೀಡಿ ಎಂದು ಕೋರಿವೆ.

ಈ ಮಧ್ಯೆ, ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಮೆಟ್ರೋ ನೌಕರರಿಂದಲೇ ವಿರೋಧ ವ್ಯಕ್ತವಾಗಿವೆ. ದರ ಏರಿಕೆ ಬದಲು ಸೋರಿಕೆ ತಪ್ಪಿಸಿದ್ರೆ, ಅದ್ರಿಂದಲೇ 60-70ಕೋಟಿ ಉಳಿಸಬಹುದು ಎಂಬ ಸಲಹೆ ನೀಡಿದ್ದಾರೆ.

Share This Article