ದೆಹಲಿಯಿಂದ ಆಗಮಿಸಿ ಭೀಮಣ್ಣ ಖಂಡ್ರೆ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಡಿಕೆಶಿ

1 Min Read

– ಮತ್ತೆ ದೆಹಲಿಗೆ ವಾಪಸ್

ಬೀದರ್: ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷರಾದ ಭೀಮಣ್ಣ ಖಂಡ್ರೆ (Bheemanna Khandre) ಅವರ ಪಾರ್ಥಿವ ಶರೀರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಬೀದರ್‌ನ (Bidar) ಭಾಲ್ಕಿಯಲ್ಲಿ ಶನಿವಾರ ಅಂತಿಮ ನಮನ ಸಲ್ಲಿಸಿ, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡರು.

ದೆಹಲಿ ಪ್ರವಾಸದಲ್ಲಿದ್ದ ಡಿಕೆ ಶಿವಕುಮಾರ್ ಭೀಮಣ್ಣ ಖಂಡ್ರೆ ಅವರು ಲಿಂಗೈಕ್ಯರಾದ ಸುದ್ದಿ ತಿಳಿದು, ದೆಹಲಿಯಿಂದ ಹೈದರಾಬಾದ್‌ಗೆ ಆಗಮಿಸಿ, ಅಲ್ಲಿಂದ ವಿಶೇಷ ವಿಮಾನದಲ್ಲಿ ಬೀದರ್‌ಗೆ ಆಗಮಿಸಿದರು. ಇದನ್ನೂ ಓದಿ: ಜ.24 ರಂದು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 42,345 ಮನೆಗಳ ಹಂಚಿಕೆ: ಸಚಿವ ಜಮೀರ್

ಭೀಮಣ್ಣ ಖಂಡ್ರೆ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡ ನಂತರ ಮತ್ತೆ ಹೈದರಾಬಾದ್ ಮೂಲಕ ದೆಹಲಿಗೆ ವಾಪಸ್ ತೆರಳಿದರು. ಇದನ್ನೂ ಓದಿ: ಬಾರ್ ಲೈಸೆನ್ಸ್ ನೀಡಲು 2.25 ಕೋಟಿಗೆ ಬೇಡಿಕೆ – ಲೋಕಾಯುಕ್ತ ಬಲೆಗೆ ಬಿದ್ದ ಅಬಕಾರಿ ಡಿಸಿ

Share This Article