ಬೆಂಗಳೂರು: ಸದನದಲ್ಲಿ ಆರ್‌ಎಸ್‌ಎಸ್ (RSS) ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ನಡೆಗೆ ಜೆಡಿಎಸ್ (JDS) ಲೇವಡಿ ಮಾಡಿದೆ.
ಎಕ್ಸ್‌ನಲ್ಲಿ ಡಿಕೆಶಿವಕುಮಾರ್ ವಿರುದ್ದ ಲೇವಡಿ ಮಾಡಿರೋ ಜೆಡಿಎಸ್, ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂತ ಕಾಲೆಳೆದಿದೆ. ಇದನ್ನೂ ಓದಿ: ಹಬ್ಬಕ್ಕೆ ಬಟ್ಟೆ ಖರೀದಿಸುತ್ತಿದ್ದಾಗ ಕುಸಿದು ಬಿದ್ದು 17ರ ವಿದ್ಯಾರ್ಥಿ ಸಾವು
ಜೆಡಿಎಸ್ ಎಕ್ಸ್‌ನಲ್ಲಿ ಏನಿದೆ?
ಉಚ್ಛಾಟನೆಗೆ ಹೆದರಿ ಕ್ಷಮೆಯಾಚಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್. ಸದನದಲ್ಲಿ ಹುಲಿ, ಹೈಕಮಾಂಡ್ ಮುಂದೆ ಇಲಿ.ವಿಧಾನಸಭೆಯಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿ ಇಟಲಿ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ರಣಹೇಡಿ ಡಿಕೆಶಿ ಅಧಿಕಾರ ಉಳಿಸಿಕೊಳ್ಳಲು, ಉಚ್ಛಾಟನೆಯಿಂದ ಪಾರಾಗಲು ಮಂಡಿಯೂರಿ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಇವಿ ವಾಹನ ಇ-ವಿಟಾರ ರಫ್ತಿಗೆ ಪ್ರಧಾನಿ ಮೋದಿ ಚಾಲನೆ
ನಾಯಕ ಸಮುದಾಯದ ಸಚಿವರನ್ನು ಏಕಾಏಕಿ ಮಂತ್ರಿಸ್ಥಾನದಿಂದ ವಜಾಗೊಳಿಸಲಾಗಿತ್ತು. ಅವರಿಗೆ ಕ್ಷಮೆಕೇಳುವ ಒಂದು ಅವಕಾಶವನ್ನು ಸಹ ಹೈಕಮಾಂಡ್ ನೀಡಿರಲಿಲ್ಲ. ಕಾಂಗ್ರೆಸ್ (Congress) ಹೈಕಮಾಂಡ್‌ನಲ್ಲಿ ದಲಿತರಿಗೊಂದು ನ್ಯಾಯ, ಬಲಾಢ್ಯರಿಗೊಂದು ನ್ಯಾಯ ಎಂದು ಟೀಕಿಸಿದೆ. ಇದನ್ನೂ ಓದಿ: ಒಂದೇ ಸೀಟ್‌ಗಾಗಿ ಮಹಿಳೆಯರಿಬ್ಬರ ಫೈಟ್ – ಜುಟ್ಟು ಹಿಡಿದು ಜಗಳವಾಡಿದ ವಿಡಿಯೋ ವೈರಲ್