ಖಾಸಗಿ ಹೋಟೆಲ್‌ನಲ್ಲಿ ಡಿಕೆಶಿ ಬೆಂಬಲಿಗ ಶಾಸಕರ ಸಭೆ

1 Min Read

ಬೆಂಗಳೂರು: ಖಾಸಗಿ ಹೋಟೆಲ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಬೆಂಬಲಿಗ ಶಾಸಕರು ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಮೇಖ್ರಿ ಸರ್ಕಲ್ ಬಳಿ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಲಾಗಿದೆ. ಒತ್ತಡ ಹೆಚ್ಚಿಸಲು ಡಿಕೆಶಿ ಬೆಂಬಲಿಗರ ಸಭೆ ನಡೆಸಿದ್ದಾರೆನ್ನಲಾಗಿದೆ. ಶಾಸಕ ಹೆಚ್.ಸಿ.ಬಾಲಕೃಷ್ಣ ಬರ್ತ್ ಡೇ ಪಾರ್ಟಿ ನೆಪದಲ್ಲಿ ಶಾಸಕರು ಸಭೆ ಸೇರಿದ್ದರು.

ಸಭೆ ಸೇರಿದ್ದ ಶಾಸಕರು ಯಾರ‍್ಯಾರು?
ಸಿ.ಪಿ.ಯೋಗೇಶ್ವರ್, ಕುಣಿಗಲ್ ರಂಗನಾಥ್, ಆನೇಕಲ್ ಶಿವಣ್ಣ, ಪಾವಗಡ ವೆಂಕಟೇಶ್, ಮದ್ದೂರು ಉದಯ್ ಗೌಡ, ಮಂಥರ್ ಗೌಡ, ಬಸವರಾಜ ಶಿವಗಂಗಾ, ಶರತ್ ಬಚ್ಚೇಗೌಡ, ಗಣಿಗ ರವಿಕುಮಾರ್,
ಹೊನ್ನಾಳಿ ಶಾಂತನಗೌಡ, ಸಚಿವ ಡಿ.ಸುಧಾಕರ್, ಮಾಗಡಿ ಬಾಲಕೃಷ್ಣ, ಸಚಿವ ಮಂಕಾಳು ಸುಬ್ಬ ವೈದ್ಯ, ರಮೇಶ್ ಬಂಡಿಸಿದ್ದೇಗೌಡ, ಹರೀಶ್ ಗೌಡ, ಗಣೇಶ್ ಹುಕ್ಕೇರಿ, ಪ್ರಕಾಶ್ ಕೋಳಿವಾಡ, ನಯನ ಮೋಟಮ್ಮ.

Share This Article