ನಮೋ ಪ್ರಚಂಡ ಗೆಲುವು – ಪಾಕ್‍ನಲ್ಲಿರೋ ದಾವೂದ್‍ಗೆ ಭಯ

Public TV
2 Min Read

ನವದೆಹಲಿ: ಭಾರತದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಮರಳಿದ್ದಕ್ಕೆ ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂಗೆ ಭಯ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಪ್ರಚಂಡ ಗೆಲುವು ಸಾಧಿಸಿ ಮೋದಿ ಸಂಪೂರ್ಣ ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿದ್ದರೆ. ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದಿರುವುದು ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ದಾವೂದ್‍ಗೆ ಭಯ ತಂದಿದೆ. ಇದರ ಬಗ್ಗೆ ಚರ್ಚೆ ಮಾಡಲು ಐಎಸ್‍ಐ ಸಭೆ ಕರೆದಿದ್ದಾನೆ ಎಂದು ಉನ್ನತ ಮೂಲಗಳಿಂದ ಮಾಹಿತಿ ದೊರಕಿದೆ.

ಎರಡು ದಶಕಗಳಿಂದ ಪಾಕಿಸ್ತಾನದಲ್ಲಿ ನೆಲೆಸಿರುವ ದಾವೂದ್ ಅಲ್ಲಿ ಕುಳಿತು ಎಲ್ಲಾ ಭೂಗತ ಲೋಕದ ಕೆಲಸವನ್ನು ಮಾಡುತ್ತಿದ್ದ. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತದಲ್ಲಿ ದಾವೂದ್ ವಿರುದ್ಧ ಕ್ರಮಗಳನ್ನು ಕೈಗೊಂಡಿತ್ತು ಮತ್ತು ಅವನ ಸಹಚರರ ಮೇಲೆ ಕಣ್ಣಿಟ್ಟಿತ್ತು. 2019ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರಲ್ಲ. ನನಗೆ ಒಳ್ಳೆಯ ಸಮಯ ಬರುತ್ತೆ ಎಂದುಕೊಂಡಿದ್ದ ದಾವೂದ್‍ಗೆ ಈಗ ಮೋದಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಆತಂಕವನ್ನು ಮೂಡಿಸಿದೆ ಎಂದು ಗುಪ್ತಚರ ಸಂಸ್ಥೆಗಳು ತಿಳಿಸಿವೆ.

ಮೋದಿ ಅಧಿಕಾರಕ್ಕೆ ಬಂದಿರುವುದರಿಂದ ಕಂಗಾಲಗಿರುವ ದಾವೂದ್, ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‍ಐನ ಅಧಿಕಾರಿಗಳೊಂದಿಗೆ ತುರ್ತುಸಭೆ ನಡೆಸಿ ತನ್ನ ಭಯವನ್ನು ಹೇಳಿಕೊಂಡಿದ್ದಾನೆ. ಈ ಸಭೆಯಲ್ಲಿ ಮೋದಿಯವರಿಗೆ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಅಮೆರಿಕ ಮತ್ತು ಇಸ್ರೇಲ್ ದೇಶಗಳ ಜೊತೆ ಅವರಗಿರುವ ಸಂಬಂಧವನ್ನು ನೋಡಿ ತೀವ್ರ ಕಳವಳ ವ್ಯಕ್ತಪಡಿಸಿದ್ದು. ತನಗೆ ಹೆಚ್ಚಿನ ಭದ್ರತೆಯನ್ನು ನೀಡಬೇಕು ಎಂದು ಐಎಸ್‍ಐ ಮತ್ತು ಪಾಕ್ ಸೇನೆಯ ಬಳಿ ಮನವಿ ಮಾಡಿದ್ದಾರೆ.

ಈ ವಿಚಾರದ ಬಗ್ಗೆ ಮಾತನಾಡಿರುವ ನಿವೃತ್ತ ಐಪಿಎಸ್ ಅಧಿಕಾರಿ ಪಿ.ಕೆ ಜೈನ್, ಮೋದಿ ಮತ್ತೆ ಅಧಿಕಾರಕ್ಕೆ ಬಂದಿರುವುದು ಹಲವಾರು ಅಂತಾರಾಷ್ಟ್ರೀಯ ಸಮೀಕರಣದಲ್ಲಿ ಬದಲಾವಣೆ ತಂದಿದೆ. ಇದರಿಂದ ಪಾಕಿಸ್ತಾನ ಮತ್ತು ದಾವೂದ್ ಇಬ್ರಾಹಿಂಗೆ ಮಾನಸಿಕವಾಗಿ ಒತ್ತಡ ಹೆಚ್ಚಾಗಿದೆ. ದಾವೂದ್‍ನನ್ನು ಬಂಧಿಸಿ ಭಾರತಕ್ಕೆ ಕರೆತರವುದು ನಾವು ಪಾಕಿಸ್ತಾನದ ಮೇಲೆ ಎಷ್ಟು ಒತ್ತಡ ಹಾಕುತ್ತೇವೆ ಎಂಬುದರ ಮೇಲೆ ನಿಂತಿದೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಭಾರತ ನನ್ನ ಬಂಧಿಸುತ್ತದೆ ಎಂದು ಹೆದರಿರುವ ದಾವೂದ್, ಮೋದಿ ಅವರು ನನ್ನ ಬಂಧಿಸಲು ಏನ್ ಬೇಕಾದರೂ ಮಾಡುತ್ತಾರೆ. ನನನ್ನು ಬಂಧಿಸಲು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆ ಕೂಡ ಭಾರತಕ್ಕೆ ಸಹಾಯ ಮಾಡುತ್ತವೆ. ಆದ್ದರಿಂದ ನನಗೆ ಹೆಚ್ಚಿನ ಭದ್ರತೆ ಬೇಕು ಎಂದು ಐಎಸ್‍ಐ ಉನ್ನತ ಅಧಿಕಾರಗೆ ಒತ್ತಡ ಹಾಕಿದ್ದಾನೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *