ಯುಎಇಯಲ್ಲಿ ಉಕ್ರೇನ್‌, ರಷ್ಯಾ, ಅಮೆರಿಕದ ಮಧ್ಯೆ ಮೊದಲ ತ್ರಿಪಕ್ಷಿಯ ಸಭೆ – ಯುದ್ಧ ಅಂತ್ಯವಾಗುತ್ತಾ?

1 Min Read

ದಾವೋಸ್‌: ರಷ್ಯಾ-ಉಕ್ರೇನ್‌ (Russia -Ukraine) ನಡುವೆ ನಡೆಯುತ್ತಿರುವ ಯುದ್ಧ (War) ಅಂತ್ಯವಾಗುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಈ ಪ್ರಶ್ನೆ ಏಳಲು ಕಾರಣ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮದಲ್ಲಿ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಮಾಡಿದ ಮಹತ್ವದ ಘೋಷಣೆಯಿಂದ ಕುತೂಹಲ ಹೆಚ್ಚಾಗಿದೆ.

ಯುಎಇಯಲ್ಲಿ ಜನವರಿ 23 ಮತ್ತು 24 ರಂದು ಉಕ್ರೇನ್, ಅಮೆರಿಕ ಮತ್ತು ರಷ್ಯಾ ನಡುವಿನ ತ್ರಿಪಕ್ಷೀಯ ಸಭೆ ನಡೆಯಲಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಇದು ಉಕ್ರೇನ್, ರಷ್ಯಾ ಮತ್ತು ಅಮೆರಿಕದ ಮಧ್ಯೆ ನಡೆಯುತ್ತಿರುವ ಮೊದಲ ತ್ರಿಪಕ್ಷೀಯ ಇದಾಗಿದ್ದು ಯುದ್ಧದ ಅಂತ್ಯಕ್ಕೆ ಕಾರಣವಾಗಲಿ ಎಂದು ಆಶಿಸಿದರು.  ಇದನ್ನೂ ಓದಿ: ಅಸ್ತಿತ್ವಕ್ಕೆ ಬಂತು ಟ್ರಂಪ್‌ ಕನಸಿನ ಬೋರ್ಡ್‌ ಆಫ್‌ ಪೀಸ್‌ – ಪಾಕಿಸ್ತಾನವೂ ಸದಸ್ಯ ದೇಶ


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಒಂದು ಗಂಟೆಯ ಸಭೆಯ ನಂತರ ಅವರ ಝೆಲೆನ್ಸ್ಕಿ ಅವರಿಂದ ಈ ಹೇಳಿಕೆ ಪ್ರಕಟವಾಗಿದೆ.

ನಮ್ಮ ವ್ಯಕ್ತಿಗಳು ಇಂದು ಅಮೆರಿಕನ್ನರೊಂದಿಗೆ ಸಭೆ ನಡೆಸುತ್ತಿದ್ದಾರೆ. ನಾಳೆ ಅಮೆರಿಕದವರು ರಷ್ಯನ್ನರೊಂದಿಗೆ ಸಭೆ ನಡೆಸಲಿದ್ದಾರೆ. ರಷ್ಯಾ ರಾಜಿಯಾಗಲು ಸಿದ್ದವಾಗಬೇಕು ಎಂದರು.

Share This Article