ಕೊಹ್ಲಿ ಕರೆಗಾಗಿ ಕಾಯುತ್ತಿದ್ದೇನೆ ಎಂದ ಡೇವಿಡ್ ವಾರ್ನರ್

Public TV
1 Min Read

ಮುಂಬೈ: ಭಾರತದ ನೆಲದಲ್ಲಿ ಕ್ರಿಕೆಟ್ ಆಡುವುದು ವಿಶೇಷವಾಗಿರುತ್ತದೆ. ಟೀಂ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ನಾವು ಗಟ್ಟಿ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಆಸೀಸ್ ತಂಡದ ಆಟಗಾರ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇದೇ ವೇಳೆ ನಾನು ಈ ಬಾರಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಟುಂಬದೊಂದಿಗೆ ಡಿನ್ನರ್ ಮಾಡಲು ಆಸೆ ಪಡುತ್ತಿದ್ದು, ಕೊಹ್ಲಿ ಕರೆಗಾಗಿ ಕಾಯುತ್ತಿದ್ದೇನೆ ಎಂದು ವಾರ್ನರ್ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಡೇವಿಡ್ ವಾರ್ನರ್ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ಐಪಿಎಲ್ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಇದೇ ವೇಳೆ ಐಪಿಎಲ್‍ನಲ್ಲಿ ಆಡಿರುವುದರಿಂದ ನನಗೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನನ್ನನ್ನು ಡಿನ್ನರ್ ಕರೆಯುತ್ತಾರೆ ಎಂದು ಅವರ ಫೋನ್ ಕರೆಗಾಗಿ ಕಾಯುತ್ತಿದ್ದೇನೆ. ವಿರಾಟ್, ರಾಹುಲ್, ರೋಹಿತ್ ರಂತಹ ಆಟಗಾರರನ್ನು ಹೊಂದಿರುವ ತಂಡದ ಬಲಿಷ್ಠವಾಗಿದ್ದು, ಬುಮ್ರಾಕ್ಕೆ ತಂಡಕ್ಕೆ ಮರಳಿರುವುದು ಟೀಂ ಇಂಡಿಯಾಗೆ ಮತ್ತಷ್ಟು ಬಲ ನೀಡಿದೆ ಎಂದಿದ್ದಾರೆ.

ಇದೇ ವೇಳೆ ತಮ್ಮ ಮಗಳು ಕೊಹ್ಲಿ ಅಭಿಮಾನಿಯಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ವಾರ್ನರ್, ಮಕ್ಕಳು ಮಾತು ಯಾವಾಲೂ ಸುಂದರವಾಗಿರುತ್ತೆ. ಕೊಹ್ಲಿ ಅವರೊಂದಿಗೆ ಸವಾಲಿನ ಕ್ರಿಕೆಟ್ ಆಡಲು ಸಂತಸವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇತ್ತ ಮಂಗಳವಾರ ನಡೆದ ಪಂದ್ಯದಲ್ಲಿ ಅಬ್ಬರಿಸಿದ ಆಸೀಸ್ ಆರಂಭಿಕರಾದ ಡೇವಿಡ್ ವಾರ್ನರ್ ಹಾಗೂ ಫಿಂಚ್ ಜೋಡಿ, 5 ಸಿಕ್ಸರ್, 30 ಬೌಂಡರಿಗಳೊಂದಿಗೆ 74 ಎಸೆತ ಬಾಕಿ ಇರುವಂತೆ 258 ರನ್ ಸಿಡಿಸಿ ತಂಡದಕ್ಕೆ ಜಯ ತಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *