ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆಯಾಚಿಸಿದ ಡೇವಿಡ್‌ ವಾರ್ನರ್‌ – ಏಕೆ ಗೊತ್ತೇ?

Public TV
2 Min Read

– 2027ರ ವಿಶ್ವಕಪ್‌ನಲ್ಲೂ ಆಡ್ತಾರಾ ಡೇವಿಡ್‌ ವಾರ್ನರ್‌

ಅಹಮದಾಬಾದ್‌: 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ವಿಶ್ವ ಸಾಮ್ರಾಟನಾದ ಬೆನ್ನಲ್ಲೇ ಟೀಂ ಇಂಡಿಯಾ ಅಭಿಮಾನಿಗಳಲ್ಲಿ (Team India Fans) ಆಸೀಸ್‌ ಆಟಗಾರ ಡೇವಿಡ್‌ ವಾರ್ನರ್‌ (David Warner) ಭಾರತೀಯ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಕಾಂಗರೂ ಪಡೆ ಟೀಂ ಇಂಡಿಯಾ (Team India) ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿ 6ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಆದ್ರೆ ತಮ್ಮ ಎಕ್ಸ್‌ ಖಾತೆಯಲ್ಲಿ ಟೀಂ ಇಂಡಿಯಾ ಅಭಿಮಾನಿಗಳ ಕ್ಷಮೆ ಕೋರಿರುವ ಡೇವಿಡ್‌ ವಾರ್ನರ್‌, ಆಸ್ಟ್ರೇಲಿಯಾ (Australia) 6ನೇ ಟ್ರೋಫಿ ಗೆಲ್ಲುವ ಮೂಲಕ ಕೋಟ್ಯಾನು ಕೋಟಿ ಭಾರತೀಯ ಅಭಿಮಾನಿಗಳ ಹೃದಯ ಒಡೆದಿದ್ದೇವೆ ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಾನು ಕ್ಷಮೆಯಾಚಿಸುತ್ತೇನೆ. ನಿಜಕ್ಕೂ ಇದೊಂದು ಅತ್ಯದ್ಬುತ ಪಂದ್ಯವಾಗಿತ್ತು ಮತ್ತು ನಂಬಲಾಗದ ವಾತಾವರಣ ಸೃಷ್ಟಿಯಾಗಿತ್ತು. ಭಾರತ ನಿಜಕ್ಕೂ ಗಂಭೀರವಾದ ವಿಶ್ವಕಪ್ ಟೂರ್ನಿಯನ್ನೇ ನಡೆಸಿಕೊಟ್ಟಿದೆ. ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿಕೊಂಡಿದ್ದಾರೆ. ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 241 ರನ್ ಗಳ ಸವಾಲನ್ನು ಹಿಂಬಾಲಿಸಿ 6 ವಿಕೆಟ್ ಗಳ ಗೆಲುವು ಸಾಧಿಸಿತ್ತು. ಇದನ್ನೂ ಓದಿ: ರೋಹಿತ್‌ ಶರ್ಮಾ ವಿಶ್ವದಲ್ಲೇ ಅತ್ಯಂತ ನತದೃಷ್ಟ ವ್ಯಕ್ತಿ – ಶತಕ ಸಿಡಿಸಿದ ಟ್ರಾವಿಸ್‌ ಹೆಡ್‌ ಮಾತು

2027ವಿಶ್ವಕಪ್‌ನಲ್ಲಿ ಆಡ್ತಾರಾ ವಾರ್ನರ್‌?
2023ರ ಏಕದಿನ ವಿಶ್ವಕಪ್ ಟೂರ್ನಿಯ 11 ಪಂದ್ಯಗಳಿಂದ 2 ಶತಕ ಹಾಗೂ 2 ಅರ್ಧಶತಕ ನೆರವಿನಿಂದ 535 ರನ್ (50 ಬೌಂಡರಿ, 24 ಸಿಕ್ಸರ್‌) ಗಳಿಸುವ ಮೂಲಕ ಡೇವಿಡ್ ವಾರ್ನರ್ ಪ್ರಸಕ್ತ ವಿಶ್ವಕಪ್ ಟೂರ್ನಿಯನ್ನು ಸ್ಮರಣೀಯ ಆಗಿಸಿಕೊಂಡಿದ್ದಾರೆ. ಇದರೊಂದಿಗೆ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಒಟ್ಟು 6 ಶತಕ, 5 ಅರ್ಧಶತಕ ಸೇರಿ 1,527 ರನ್‌ ಪೂರೈಸಿರುವ ಡೇವಿಡ್‌ ವಾರ್ನರ್‌ 2027ರ ವಿಶ್ವಕಪ್‌ ಟೂರ್ನಿಯಲ್ಲೂ ಆಡುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಸೂರ್ಯ ನಾಯಕ – ಹಿರಿಯರಿಗೆ ವಿಶ್ರಾಂತಿ, ಲಕ್ಷ್ಮಣ್‌ ಕೋಚ್‌

37 ವರ್ಷದ ಡೇವಿಡ್‌ ವಾರ್ನರ್‌ ಅವರ ಏಕದಿನ ವಿಶ್ವಕಪ್ ವೃತ್ತಿಜೀವನವು ಅದ್ಭುತ ದಾಖಲೆಯೊಂದಿಗೆ ಕೊನೆಗೊಂಡಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವರದಿಯೊಂದಕ್ಕೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನು ಮುಕ್ತಾಯಗೊಳಿಸಿದ್ದೇನೆ ಅಂತ ಯಾರು ಹೇಳಿದ್ದು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಇದೇ ಕೊನೆಯಲ್ಲ, ನಾವು ಕಪ್‌ ಗೆಲ್ಲೋವರೆಗೂ ಇದು ಮುಗಿಯಲ್ಲ – ಗಿಲ್‌ ಭಾವುಕ

Share This Article