– ಸಾವಿರಾರು ಕೋಟಿ ವಹಿವಾಟು ಪತ್ತೆ
ದಾವಣಗೆರೆ: ಬಹುದೊಡ್ಡ ಸೈಬರ್ ವಂಚನೆ ಪ್ರಕರಣ ಜಾಲವನ್ನು (Cyber Fraud Case) ಪತ್ತೆ ಹಚ್ಚಿದ್ದ ದಾವಣಗೆರೆ (Davangere) ಸೆನ್ ಠಾಣೆ ಪೊಲೀಸರು ಈ ಪ್ರಕರಣವನ್ನು ಸಿಐಡಿಗೆ (CID) ವಹಿಸಿದ್ದಾರೆ.
ಎರಡೇ ತಿಂಗಳಲ್ಲಿ ಸೈಬರ್ ವಂಚಕನ ಅಕೌಂಟ್‌ನಲ್ಲಿ 150 ಕೋಟಿ ರೂ.ನಿಂದ ಒಂದು ಸಾವಿರ ಕೋಟಿ ರೂ.ಗೂ ಅಧಿಕ ಕೋಟಿ ವಹಿವಾಟಗಿರುವುದು ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಬೇರೆ ರಾಜ್ಯದ ಕೇಸ್‌ಗಳಲ್ಲಿ ವಂಚನಕನ ನಕಲಿ ಅಕೌಂಟ್‌ಗೆ ಸಾವಿರಾರು ಕೋಟಿ ರೂ. ವಹಿವಾಟು ಇರೋದು ಪತ್ತೆಯಾಗಿತ್ತು. ಈ ಬಗ್ಗೆ ಹೆಚ್ಚಿನ ತನಿಖೆಗೆಗಾಗಿ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಇದನ್ನೂ ಓದಿ: ದಾವಣಗೆರೆ | ದೇಶಾದ್ಯಂತ ಹಲವರ ಖಾತೆಗಳಿಂದ 150 ಕೋಟಿ ಎಗರಿಸಿದ್ದ ಸೈಬರ್ ವಂಚಕ ಅರೆಸ್ಟ್
ಏನಿದು ಪ್ರಕರಣ?
ದಾವಣಗೆರೆಯ ಪ್ರಮೋದ್ ಎಂಬಾತ ಸೈಬರ್ ವಂಚಕರಿಂದ 52 ಲಕ್ಷ ರೂ. ಕಳೆದು ಕೊಂಡಿದ್ದೇನೆಂದು ಆಗಸ್ಟ್ 29 ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು, ಬೇಲೂರು ಮೂಲದ ಸೈಯದ್ ಅರ್ಫಾತ್ ಎಂಬಾತನನ್ನು ಬಂಧಿಸಿ, ಮೊಬೈಲ್ ವಶ ಪಡಿಸಿಕೊಂಡಿದ್ದರು. ಆತನ ಅಕೌಂಟ್‌ನಲ್ಲಿ ಎರಡೇ ತಿಂಗಳಲ್ಲಿ ನೂರಾರು ಕೋಟಿ ರೂ. ವಹಿವಾಟು ಆಗಿರುವುದು ತನಿಖೆ ವೇಳೆ ಗೊತ್ತಾಗಿತ್ತು.
ಈ ಪ್ರಕರಣದ ಮತ್ತೊಬ್ಬ ಅರೋಪಿ ಗುಜರಾತ್‌ನ ಅಹಮದಾಬಾದ್ ಮೂಲದ ಸಂಜಯ್ ಕುಂಟ್ ಎಂಬಾತನನ್ನು ಸಹ ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ವೇಳೆ ಕರೆಂಟ್ ಅಕೌಂಟ್‌ಗಳ ಮಾರಾಟ ದಂಧೆ ಬಯಲಾಗಿತ್ತು. ದೂರುದಾರ ಪ್ರಮೋದ್ ಕೂಡ ಈ ವಂಚನೆ ಗ್ಯಾಂಗ್ ಸದಸ್ಯ ಎಂದು ತನಿಖೆ ವೇಳೆ ತಿಳಿದು ಬಂದಿತ್ತು.
ಉದ್ಯಮ ಇಲ್ಲದೇ ಇದ್ದರೂ ಆರೋಪಿಗಳು ಬ್ಯಾಂಕ್, ಸೊಸೈಟಿಗಳಲ್ಲಿ ಕರೆಂಟ್ ಅಕೌಂಟ್ ತೆರೆದು ಮಾರಾಟ ಮಾಡುತ್ತಿದ್ದರು. ಕಮಿಷನ್ ಆಸೆಗೆ ಪ್ರಮೋದ್ ಕೂಡ ವಂಚಕರ ಕೈಗೆ ಕರೆಂಟ್ ಅಕೌಂಟ್ ಮಾಹಿತಿ ನೀಡುತ್ತಿದ್ದ. ಅಕೌಂಟ್‌ನಲ್ಲಿ ಜಮೆಯಾದ ಹಣಕ್ಕೆ ಕಮಿಷನ್ ನೀಡಿಲ್ಲ ಎಂದು ಆಕ್ರೋಶಗೊಂಡಿದ್ದ ಪ್ರಮೋದ್. ತನ್ನ ಅಕೌಂಟ್‌ನಲ್ಲಿದ್ದ ಹಣ ವಂಚಕರು ಕದ್ದಿದ್ದಾರೆ ಎಂದು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ.
ಪ್ರಕರಣದ ತನಿಖೆ ನಡೆಸಿದ್ದ ಸೆನ್ ಠಾಣೆ ಪೊಲೀಸರು, ಪ್ರಮೋದ್ ಸೇರಿದಂತೆ ಉಳಿದ ಇಬ್ಬರ ಅಕೌಂಟ್‌ಗೆ ಬೇರೆ ಖಾತೆಗಳಿಂದ ಸಾವಿರಾರು ಕೋಟಿ ರೂ. ಹಣ ಬಂದಿರುವುದನ್ನು ಪತ್ತೆ ಮಾಡಿದ್ದರು. ಅಲ್ಲದೇ ದುಬೈನಿಂದ ಕರೆಂಟ್ ಅಕೌಂಟ್‌ಗೆ ಕೋಟಿ ಕೋಟಿ ರೂ. ಹಣ ಜಮೆ ಆಗ್ತಿತ್ತು. ಇದೆಲ್ಲ ಆನ್‌ಲೈನ್ ಗೇಮ್, ಗ್ಯಾಂಬ್ಲಿಂಗ್, ಫೇಕ್ ಟ್ರೇಡಿಂಗ್ ಸೇರಿದ ಹಣ ಎನ್ನಲಾಗಿದೆ. ಈ ಖಾತೆಯಲ್ಲಿ 1000ಕ್ಕೂ ಅಧಿಕ ಕೋಟಿ ರೂ. ಹಣ ವಹಿವಾಟು ನಡೆದಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಇದನ್ನೂ ಓದಿ: ದಾವಣಗೆರೆ | 150 ಕೋಟಿ ವಂಚನೆ ಪ್ರಕರಣ – ದೂರುದಾರನೇ ಸೈಬರ್ ವಂಚಕರ ಗ್ಯಾಂಗ್ ಸದಸ್ಯ!


