ದಾವಣಗೆರೆ: ಕಾರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳು, ಓರ್ವ ಡೆಂಟಲ್ ವಿದ್ಯಾರ್ಥಿ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಪ್ರಜೆ ಪ್ಯಾಟ್ರಿಕ್(44), ಪ್ರಾಮೇಸೇ (43), ಬೆಂಗಳೂರಿನ ಮಹ್ಮದ್ ಬಿಲಾಲ್ (29), ಸೈಯದ್ ಜಾಬೀರ್ (31) ಹಾಗೂ ಡೆಂಟಲ್ ಕಾಲೇಜು ವಿದ್ಯಾರ್ಥಿ ಸಿ.ಎನ್ ಕಲ್ಯಾಣ್ ಬಂಧಿತ ಆರೋಪಿಗಳು.ಇದನ್ನೂ ಓದಿ: ಎಐಸಿಸಿ ಒಬಿಸಿ ವಿಭಾಗದ `ಭಾಗೀಧಾರಿ ನ್ಯಾಯ ಸಮ್ಮೇಳನ’ದ ಉದ್ದೇಶ ವಿವರಿಸಿದ ಸಿಎಂ
ಶುಕ್ರವಾರ ಸಂಜೆ ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಕಲ್ಪನಹಳ್ಳಿ ಗ್ರಾಮದ ಬಳಿ ಕಾರೊಂದನ್ನು ನಿಲ್ಲಿಸಿ ಡ್ರಗ್ಸ್ ಮಾರಾಟ ಮಾಡಲಾಗುತ್ತಿದೆ ಎಂದು ಸೆನ್ ಪೊಲೀಸ್ ಠಾಣೆಗೆ ಮಾಹಿತಿ ಬಂದಿದೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಇಬ್ಬರು ನೈಜೀರಿಯಾ ಪ್ರಜೆಗಳನ್ನು ಪರಿಶೀಲನೆ ನಡೆಸಿದ್ದು, ಕಾರಿನಲ್ಲಿ ಡ್ರಗ್ಸ್ ಪತ್ತೆಯಾಗಿದೆ.
ಅದನ್ನು ಮೆಡಿಕಲ್ ಕಾಲೇಜ್ ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದ್ದು, 25 ಸಾವಿರ ಮೌಲ್ಯದ 13 ಗ್ರಾಂ ಡ್ರಗ್ಸ್, ಆರು ಮೊಬೈಲ್, ಒಂದು ಕಾರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಭಾರತದ ಮೊದಲ ಹೈಡ್ರೋಜನ್ ಚಾಲಿತ ಕೋಚ್ ಪರೀಕ್ಷೆ ಯಶಸ್ವಿ