ದಾವಣಗೆರೆ | ಅಪ್ರಾಪ್ತನಿಂದ ಬೈಕ್ ರೈಡ್ – ಮಾಲೀಕನಿಗೆ 25,000 ದಂಡ

Public TV
1 Min Read

ದಾವಣಗೆರೆ: ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಿದ ಮಾಲೀಕನಿಗೆ ದಾವಣಗೆರೆ ಸಂಚಾರಿ ಠಾಣೆ ಪೊಲೀಸರು (Davangere Traffic Police) ಬಿಸಿ ಮುಟ್ಟಿಸಿದ್ದಾರೆ. ಬೈಕ್ ಮಾಲೀಕನಿಗೆ ಸುಮಾರು 25 ಸಾವಿರ ರೂ. ದಂಡ ವಿಧಿಸಿದ್ದಾರೆ.

ನಗರದ (Davanagere) ಎಂಇ ರಸ್ತೆಯಲ್ಲಿ ಉತ್ತರ ಸಂಚಾರಿ ಠಾಣೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಬೈಕ್ ಒಂದನ್ನು ತಡೆದು ನಿಲ್ಲಿಸಿದಾಗ, ಚಾಲನೆ ಮಾಡುತ್ತಿರುವುದು ಅಪ್ರಾಪ್ತ ಎಂದು ತಿಳಿದು ಬಂದಿತ್ತು. ಈ ಸಂಬಂಧ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.ಇದನ್ನೂ ಓದಿ: ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಹರಿಯುತ್ತಿದ್ದಂತೆ ಕುಸಿದ ಸೇತುವೆ – ರೈತರ ಪರದಾಟ

ಪ್ರಕರಣ ಸಂಬಂಧ ನ್ಯಾಯಾಲಯವು (Court) ಅಪ್ರಾಪ್ತ ಬಾಲಕನಿಗೆ ಚಾಲನೆ ಮಾಡಲು ನೀಡಿದ್ದಕ್ಕೆ ಬೈಕ್ ಮಾಲೀಕನಿಗೆ 25 ಸಾವಿರ ದಂಡ ವಿಧಿಸಿದೆ. ಈ ಮೂಲಕ ಅಪ್ರಾಪ್ತರಿಗೆ ಬೈಕ್ ನೀಡುವವರಿಗೆ ಪೊಲೀಸರು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಯುವಕನ ಜೊತೆ ವಿವಾಹಿತೆ ಪರಾರಿ – ಹಿಂದೂ ಮುಖಂಡರಿಂದ ಪ್ರತಿಭಟನೆ

Share This Article