ಬೆಂಗಳೂರು: ಕಾಂಗ್ರೆಸ್ ಪಾಲಿಗೆ ಬಾಗಲಕೋಟೆ, ದಾವಣಗೆರೆ ಎರಡು ಕ್ಷೇತ್ರದ ಉಪ ಚುನಾವಣೆ (By Election) ಸವಾಲಾಗಿದೆ. ಎಲ್ಲಾ 140 ಶಾಸಕರು ಹಾಗೂ ಸಚಿವರಿಗೂ ಚುನಾವಣಾ ಜವಾಬ್ದಾರಿ ಹಂಚಿಕೆಗೆ ಸಿದ್ಧತೆ ನಡೆಸಿದೆ. ನಾಳೆ (ಮಾ.25) ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಶತಾಯ ಗತಾಯ ಉಪ ಚುನಾವಣೆ ಗೆಲ್ಲುವ ಲೆಕ್ಕಾಚಾರದಲ್ಲಿ ಶಾಸಕರು, ಸಚಿವರನ್ನ ಅಖಾಡಕ್ಕೆ ಇಳಿಸಲು ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇ ಖಾತಾದಲ್ಲಿ ಲಂಚಾವತಾರ – ಸಾರ್ವಜನಿಕರಿಗೆ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ: ಅಶೋಕ್
ಇನ್ನು ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಒಟ್ಟು 16 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆಯಾಗಿವೆ. ನಿನ್ನೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದರಿಂದ 13 ಅಭ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆಯಾಗಿವೆ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರ ಪತ್ನಿ ಸಂಧ್ಯಾ ಪ್ರಚಾರ ಮಾಡುವ ವೇಳೆ ಮುಸ್ಲಿಂ ಮಹಿಳೆಯರು ಹಿಂದೂ ಸಂಪ್ರದಾಯದಂತೆ ಉಡಿತುಂಬಿವ ಮೂಲಕ ಬೆಂಬಲ ಕೊಟ್ಟಿದ್ದಾರೆ. ಇದನ್ನೂ ಓದಿ: ನಂದಿನಿ ಉತ್ಪನ್ನಗಳ ಪ್ರಚಾರಕ್ಕೆ RCB ಜೊತೆ ಒಪ್ಪಂದ – 1 ವರ್ಷಕ್ಕೆ 4.80 ಕೋಟಿ ಕೊಟ್ಟ KMF
ಇನ್ನು, ಸಿದ್ದರಾಮೋತ್ಸವ ಸಮಾವೇಶದ ಮಾದರಿಯಲ್ಲೇ ಯಡಿಯೂರಪ್ಪ ಉತ್ಸವಕ್ಕೆ ಪ್ಲ್ಯಾನ್ ನಡೆದಿದೆ. ಯಡಿಯೂರಪ್ಪ ಸುದೀರ್ಘ ರಾಜಕೀಯ ಯಾನದ ನೆನಪಿಗಾಗಿ ಮೇ ಮೊದಲ ವಾರದಲ್ಲಿ ಚಿತ್ರದುರ್ಗದಲ್ಲಿ ಯಡಿಯೂರಪ್ಪ ಉತ್ಸವ ಮಾಡಲು ಬಿಜೆಪಿ ನಾಯಕರ ಚಿಂತನೆ ನಡೆಸಿದ್ದಾರೆ. ಇದನ್ನೂ ಓದಿ: ಜಕ್ಕೂರು ಫ್ಲೈಯಿಂಗ್ ಸ್ಕೂಲ್ ಮೇಲೆ ರಿಯಲ್ ಎಸ್ಟೇಟ್ ಕಣ್ಣು – ಸರ್ಕಾರದ ಮೇಲೆಯೇ ಕಬಳಿಕೆ ಆರೋಪ


