ಟಿಕೆಟ್‌ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಮರ್ಥ್‌ ಶಾಮನೂರು

1 Min Read

ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರಕ್ಕೆ ಉಪಚುನಾವಣೆ (By Election) ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ವಲಯದಲ್ಲಿ ಮಹತ್ತರದ ಬೆಳವಣಿಗೆಗಳು ನಡೆಯತ್ತಿವೆ. ಕಾಂಗ್ರೆಸ್‌ನಲ್ಲಿ (Congress) ಟಿಕೆಟ್‌ ಘೋಷಣೆಗೂ ಮುನ್ನವೇ ಸಚಿವ ಎಸ್‌.ಎಸ್‌ ಮಲ್ಲಿಕಾರ್ಜುನ್‌ ಪುತ್ರ ಸಮರ್ಥ್‌ ಶಾಮನೂರು (Samartha Shamanur) ಇಂದು (ಮಾ.20) ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ.

ನಾಮಪತ್ರ ಸಲ್ಲಿಕೆಗೂ ಮುನ್ನ ನಿಟ್ಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಟಿಕೆಟ್ ಘೋಷಣೆ ಮೊದಲೇ ನಾಮಪತ್ರ ಸಲ್ಲಿಸಲು ಶಾಮನೂರು ಕುಟುಂಬ ಮುಂದಾಗಿದೆ. ಟಿಕೆಟ್ ಘೋಷಣೆ ತಡವಾದ ಹಿನ್ನೆಲೆ ಈ ಎಚ್ಚರಿಕೆ ನಡೆಗೆ ಮುಂದಾಗಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಟಿಕೆಟ್‌ಗೆ ಫೈಟ್‌ – ದಾವಣಗೆರೆ, ಬಾಗಲಕೋಟೆಯಲ್ಲಿ ಬಿಜೆಪಿಗೆ ಸಿಗುತ್ತಾ ಗೆಲುವು?

ಸಮರ್ಥ್‌ ಅವರಿಗೆ ಟಿಕೆಟ್ ಸಿಗುವಂತೆ ಶಾಮನೂರು ಕುಟುಂಬದ ಅಭಿಮಾನಿ ಡೋಲಿ ಚಂದ್ರು ಎಂಬವರು ಮಂತ್ರಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಮಂತ್ರಾಲಯದ ಸುಬುದೇಂದ್ರ ತೀರ್ಥ ಶ್ರೀಗಳ ಭೇಟಿಯಾಗಿ, ಆಶೀರ್ವಾದ ಮಾಡಿ ಶುಭಹಾರೈಸಿ ಎಂದು ಮನವಿ ಮಾಡಿದ್ದರು. ಈ ವೇಳೆ ಅಭಿಮಾನಿಗೆ ಅಕ್ಷತೆ ನೀಡಿ ಒಳ್ಳೆಯದಾಗುತ್ತೆ ಎಂದು ಶ್ರೀಗಳು ಆಶೀರ್ವದಿಸಿದ್ದು, ಆ ಪ್ರಸಾದವನ್ನು ಶಾಮನೂರು ಕುಟುಂಬದ ಜೊತೆ ಹಂಚಿಕೊಂಡಿದ್ದಾರೆ.

ಬೆಳಗ್ಗೆಯೇ ನಗರ ದೇವತೆ ದುಗ್ಗಮ್ಮ ಹಾಗೂ ಕಲ್ಲೇಶ್ವರ ದೇವಸ್ಥಾನಗಳಿಗೆ ಸಮರ್ಥ್‌ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಅವರಿಗೆ ಎಸ್‌.ಎಸ್‌ ಮಲ್ಲಿಕಾರ್ಜುನ್, ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ದಾವಣಗೆರೆ ಬಿಜೆಪಿ ಟಿಕೆಟ್ ಬದಲಾದ್ರೂ ಆಶ್ಚರ್ಯ ಇಲ್ಲ: ಯತ್ನಾಳ್‌ ಹೊಸ ಬಾಂಬ್‌

Share This Article