ದಾವಣಗೆರೆ: ಸರ್ಕಾರಿ ಅಧಿಕಾರಿಗಳಿಗೆ ಕಚೇರಿಗಳೇ ಬಾರ್ ಅಂಡ್ ರೆಸ್ಟೋರೆಂಟ್ ಆಗಿದೆ. ಅಧಿಕಾರಿಗಳು ಸರ್ಕಾರಿ ಕಚೇರಿಯಲ್ಲಿಯೇ ತಡರಾತ್ರಿ ಗುಂಡು ತುಂಡು ಪಾರ್ಟಿ ಮಾಡಿದ್ದು, ಪ್ರಶ್ನಿಸಿದ ಮಾಧ್ಯಮದವರಿಗೇ ಅವಾಜ್ ಹಾಕಿದ್ದಾರೆ.
ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ನೇತೃತ್ವದಲ್ಲಿ ಗುಂಡು ತುಂಡು ಪಾರ್ಟಿ ಬಡೆದಿದೆ. ಈ ಪಾರ್ಟಿಯಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿ ಇತರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ರೆ ಈ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರ್ ಅವರನ್ನು ಕೇಳಿದ್ರೆ ಇದಕ್ಕೂ ನನಗೆ ಸಂಬಂಧವೇ ಇಲ್ಲ ಅಂತ ಹಾರಿಕೆಯ ಉತ್ತರ ನೀಡಿದ್ದಾರೆ.
ಅಲ್ಲದೇ ಆಷಾಢ ಹಾಗಾಗಿ ಇಲ್ಲಿ ಬಂದು ಅಧಿಕಾರಿಗಳು ಗುಂಡು ತುಂಡು ಸೇವಿಸುತ್ತಾರೆ ಅಂತ ಹೇಳಿದ್ದಾರೆ. ಕ್ಯಾಮೆರಾ ಕಂಡ ತಕ್ಷಣ ಸ್ಥಳದಿಂದ ಹೊರಟ್ರು. ಇದೇ ವೇಳೆ ಸಿಬ್ಬಂದಿ ಸರ್ಕಾರಿ ಕಚೇರಿಯಲ್ಲಿ ಗುಂಡು ತುಂಡು ತಿನ್ನಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸ್ಥಳಲ್ಲಿದ್ದ ಅಧ್ಯಕ್ಷರ ಆಪ್ತನೊಬ್ಬ ಕ್ಯಾಮರಾ ಆಫ್ ಮಾಡುವಂತೆ ತಾಕೀತು ಮಾಡಿದ್ದಾನೆ.