ತನ್ನ ಸೆಕ್ಸ್ ವಿಡಿಯೋ ನೋಡಿ ಬೈದಿದ್ದಕ್ಕೆ ತಂದೆಯ ವಿರುದ್ಧವೇ ದೂರು ನೀಡಿದ್ಳು

Public TV
2 Min Read

ರಾಂಚಿ: ತಂದೆ ತನ್ನ ಮಗಳ ಮೊಬೈಲಿನಲ್ಲಿ ಯುವಕನ ಜೊತೆ ದೈಹಿಕ ಸಂಬಂಧ ಬೆಳೆಸಿದ ವಿಡಿಯೋ ನೋಡಿ ಬೈದಿದ್ದಾರೆ. ಇದರಿಂದ ಕೋಪಗೊಂಡ ಮಗಳು ತಂದೆಯ ವಿರುದ್ಧವೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ದಾಖಲಿಸಿದ ಘಟನೆ ಜಾರ್ಖಂಡ್‍ನ ರಾಂಚಿಯಲ್ಲಿ ನಡೆದಿದೆ.

ತಂದೆ ಬೈದಿದ್ದಕ್ಕೆ ಯುವತಿ ರಾತ್ರಿ ಮನೆಯಿಂದ ಮಹಿಳಾ ಪೊಲೀಸ್ ಠಾಣೆಗೆ ಓಡಿ ಹೋಗಿದ್ದಾಳೆ. ಅಲ್ಲದೆ ತನ್ನ ತಂದೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಜೈಲಿಗೆ ಕಳುಹಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಯುವತಿಯ ಆರೋಪ ಕೇಳಿ ಪೊಲೀಸರು ದೂರು ನೀಡಲು ಹೇಳಿದಾಗ ಆಕೆ ಹಿಂದೇಟು ಹಾಕಿದ್ದಾಳೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಪೊಲೀಸ್ ಠಾಣೆ ಉಸ್ತುವಾರಿ ವಿಂದ್ಯಾವಾಸಿನಿ ಸಿನ್ಹಾ, ಯುವತಿ ವಿವಿಧ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಳು. ಆಕೆಯ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಯುವತಿ ಪೊಲೀಸ್ ಠಾಣೆಯಲ್ಲಿ ಎರಡು ದಿನ ಸಮಯ ತೆಗೆದುಕೊಂಡು ತನ್ನ ಚಿಕ್ಕಪ್ಪನ ಜೊತೆ ಮನೆಗೆ ಹಿಂತಿರುಗಿದ್ದಳು. ಇದಾದ ಬಳಿಕ ಮಂಗಳವಾರ ತಡರಾತ್ರಿ ಆಕೆ, ಮತ್ತೆ ಪೊಲೀಸ್ ಠಾಣೆಗೆ ಬಂದು ತಂದೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ದಾಖಲಿಸಿದ್ದಾಳೆ.

ಪ್ರಿಯಕರನ ಜೊತೆಗಿನ ವಿಡಿಯೋ ರೆಕಾರ್ಡ್:
ಸುಮಾರು ನಾಲ್ಕೈದು ತಿಂಗಳ ಹಿಂದೆ ಯುವತಿಯ ಮೊಬೈಲ್ ಹಾಳಾಗಿತ್ತು. ಅದನ್ನು ಸರಿಪಡಿಸಲು ಯುವತಿ ತಂದೆಗೆ ಕೊಟ್ಟಿದ್ದಾಳೆ. ತಂದೆ ಆ ಮೊಬೈಲ್ ರಿಪೇರಿ ಮಾಡಿದ ಬಳಿಕ ಅದನ್ನು ಪರಿಶೀಲಿಸಲು ಮಗಳ ಬಳಿ ಪಾಸ್‍ವರ್ಡ್ ಕೇಳಿದ್ದಾರೆ. ಹೀಗೆ ತಂದೆ ಪಾಸ್‍ವರ್ಡ್ ಹಾಕಿ ಗ್ಯಾಲರಿ ನೋಡಿದಾಗ ಮಗಳು ತನ್ನ ಪ್ರಿಯಕರನ ಜೊತೆ ದೈಹಿಕ ಸಂಪರ್ಕ ಬೆಳೆಸಿದ ವಿಡಿಯೋ ಕಂಡುಬಂದಿದೆ.

ಈ ವಿಡಿಯೋ ನೋಡಿದ ತಂದೆ, ಮಗಳ ವಿರುದ್ಧ ರೊಚ್ಚಿಗೆದ್ದು ಮನೆಯಿಂದ ಹೊರ ಹೋಗದಂತೆ ಸೂಚಿಸಿದ್ದಾರೆ. ಅಲ್ಲದೆ ಯುವತಿಯ ತಾಯಿ ಕೂಡ ಆಕೆಯನ್ನು ಮನೆಯಿಂದ ಹೊರಹೋಗಲು ಬಿಡುತ್ತಿರಲಿಲ್ಲ. ಹೀಗಾಗಿ ಯುವತಿ ತಾಯಿಯ ವಿರುದ್ಧ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾಳೆ.

ಒಬ್ಬಳೇ ಮಗಳು:
ಒಬ್ಬಳೇ ಮಗಳಾಗಿರುವ ಯುವತಿ ಬಿಎಡ್ ಓದಿದ್ದಾಳೆ. ಯಾವುದೋ ಕೆಲಸದ ಮೇಲೆ ಕಾಲೇಜಿಗೆ ಹೋಗಿದ್ದಾಗ ಸ್ನೇಹಿತರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಆಗ ಆಕೆಯ ಸ್ನೇಹಿತರು ಅವಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವತಿ ಪೊಲೀಸ್ ಠಾಣೆಗೆ ಹೋದ ವಿಷಯವನ್ನು ತಿಳಿದು ಆಕೆಯ ಕುಟುಂಬದವರು ಕೂಡ ಅಲ್ಲಿಗೆ ತಲುಪಿ ಆಕೆ ಜೊತೆ ಮಾತನಾಡಿದ್ದರು. ಆದರೆ ಈ ಪ್ರಕರಣದ ಬಗ್ಗೆ ಪೊಲೀಸರು ಏನೂ ಮಾತನಾಡುತ್ತಿಲ್ಲ. ಪೊಲೀಸರು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಲಖಿತ ದೂರು ನೀಡಿದರೆ, ಹಾಗೂ ಆಕೆಯ ಆರೋಪ ತನಿಖೆ ವೇಳೆ ಸಾಬೀತಾದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ಜೈಲಿಗೆ ಕಳುಹಿಸಲು ಹಠ:
ತನ್ನ ತಂದೆಯ ಜೊತೆ ವಾಸಿಸಲು ಇಷ್ಟವಿಲ್ಲ ಎಂದು ಯುವತಿ ಹೇಳಿದ್ದಾಳೆ. ಈ ವೇಳೆ ಯುವತಿಯ ಚಿಕ್ಕಪ್ಪ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಅಲ್ಲದೆ ಯುವತಿ ತನ್ನ ತಂದೆಯನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಹಠ ಹಿಡಿದಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *