ಅತ್ತೆ ಸಾಯಲಿ ಎಂದು ದೇವರ ಮುಂದೆ ಸೊಸೆಯಿಂದ ಪ್ರಾರ್ಥನೆ

1 Min Read

ಬೆಳಗಾವಿ: ಅತ್ತೆ ಸಾಯಲಿ ಎಂದು ದೇವರ ಮುಂದೆ ಸೊಸೆಯೊಬ್ಬಳು(Daughter-in-law) ವಿಚಿತ್ರ ಪ್ರಾರ್ಥನೆ ಮಾಡಿದ್ದಾಳೆ.

ರಾಯಭಾಗ ತಾಲೂಕಿನ ಖಣದಾಳ ಗ್ರಾಮದಲ್ಲಿರುವ ಶ್ರೀ ಹುಲಿಕಾಂತೇಶ್ವರ ದೇವರಿಗೆ ಹರಿಕೆ ಹೊತ್ತು ಹುಂಡಿಯಲ್ಲಿ ಚೀಟಿ ಬರೆದು ಹಾಕಲಾಗಿದೆ.


ಅತ್ತೆಯ ಕಾಟಕ್ಕೆ ಬೇಸತ್ತ ಸೊಸೆಯಿಂದ ದೇವರಿಗೆ ವಿಚಿತ್ರ ಬೇಡಿಕೆ ಇಟ್ಟಿದ್ದು ದೇವರೇ ನನ್ನ ಕಷ್ಟ ದೂರ ಮಾಡು, ನಮ್ಮ ಅತ್ತೆ ಸಾಯಲಿ ಎಂದು ದೇವರಿಗೆ 100 ರೂ ಹಾಗೂ 10 ರೂ ಮುಖಬೆಲೆಯ ನೋಟಿನ ಒಳಗಡೆ ಬಿಳಿಹಾಳೆಯ ಮೇಲೆ ಬರೆಯಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ದಾಳಿಗೆ ಸಂಚು ಪ್ರಕರಣ – ಮುಂಬೈ ದಾಳಿಯ ಮಾಸ್ಟರ್‌ ಮೈಂಡ್‌ ಸಂಪರ್ಕದಲ್ಲಿದ್ದ ಕಾಶ್ಮೀರಿ ಉಗ್ರ

ದೇವಸ್ಥಾನ ಸಮಿತಿ ಹುಂಡಿಯ ಹಣ ಎಣಿಕೆ ಮಾಡುವಾಗ ಮುಂದಿನ ವರ್ಷದ ಜಾತ್ರೆ ಬರುವ ಮೊದಲು ನಮ್ಮ ಅತ್ತೆ ಸಾಯಲಿ ಎಂದು ಸೊಸೆ ಬರೆದಿದ್ದಾಳೆ.
Share This Article