ವೃದ್ಧಮಾವನಿಗೆ ಮನಸೋ ಇಚ್ಛೆ ಥಳಿಸಿದ KEB ಅಧಿಕಾರಿಯಾಗಿರೋ ಸೊಸೆ

By
1 Min Read

ಮಂಗಳೂರು: ವೃದ್ಧ ಮಾವನಿಗೆ ಸೊಸೆಯೊಬ್ಬಳು ಮನಸೋ ಇಚ್ಛೆ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಲಶೇಖರದಲ್ಲಿ (Kulashekara Mangaluru) ನಡೆದಿದೆ.

ಪದ್ಮನಾಭ ಸುವರ್ಣ(87), ಸೊಸೆಯಿಂದ ಹಲ್ಲೆಗೊಳಗಾದ ಮಾವ. ಆರೋಪಿ ಸೊಸೆಯನ್ನು ಉಮಾಶಂಕರಿ ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ. ಈಕೆಯ ರಾಕ್ಷಸಿ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಉಮಾಶಂಕರಿ ಪತಿ ವಿದೇಶದಲ್ಲಿ ಉದ್ಯೋಗಲ್ಲಿದ್ದಾರೆ. ಪತಿ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 9 ರಂದು ಮಾವನಿಗೆ ವಾಕ್ ಸ್ಟಿಕ್ ನಲ್ಲಿ ಸೊಸೆ ಮನಬಂದಂತೆ ಥಳಿಸಿದ್ದಾಳೆ.  ಮಾವ ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ ಥಳಿಸಿದ್ದಾಳೆ. ಅಲ್ಲದೆ ಥಳಿಸುವುದನ್ನು ತಡೆಯಲು ಹೋದಾಗ ತಳ್ಳಿದ್ದಾಳೆ. ಪರಿಣಾಮ ವೃದ್ಧನ ಕೈ, ಮುಖಕ್ಕೆ ಗಾಯಗಳಾಗಿವೆ.

ಆದರೆ ಯಾವ ಕಾರಣಕ್ಕೆ ಸೊಸೆ ಮಾವನಿಗೆ ಹೊಡೆದಿದ್ದಾಳೆ ಅನ್ನೋ ವಿಚಾರ ತಿಳಿದುಬಂದಿಲ್ಲ. ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ತಂದೆಗೆ ಥಳಿಸಿದ ಉಮಾ ಶಂಕರಿ ವಿರುದ್ಧ ಸಿಸಿಟಿವಿ ದೃಶ್ಯ ಆಧರಿಸಿ ಪದ್ಮನಾಭ ಸುವರ್ಣರ ಮಗಳು ಪ್ರಿಯಾ ಸುವರ್ಣ ದೂರು ನೀಡಿದ್ದಾರೆ. ಇದನ್ನೂ ಓದಿ: SBSP ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯ ಬರ್ಬರ ಹತ್ಯೆ

ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಉಮಾಶಂಕರಿ ವಿರುದ್ಧ ಕೊಲೆಯತ್ನ ದೂರು ದಾಖಲಾಗಿದೆ.

Share This Article