ಬೆಂಗಳೂರು: ನಮ್ಮ ಮೆಟ್ರೋಗಳಲ್ಲಿ (Namma Metro) ನಂದಿನಿ ಮಳಿಗೆ (Nandini Shop) ಓಪನ್‌ಗೆ ದಿನಾಂಕ ನಿಗದಿ ಆಗಿದೆ. ಪ್ರಾರಂಭಿಕವಾಗಿ ಮೂರು ಮೆಟ್ರೋ ಸ್ಟೇಷನ್‌ಗಳಲ್ಲಿ ನಂದಿನಿ ಮಳಿಗೆಗಳು ನಿರ್ಮಾಣ ಆಗಿದೆ. ಈ ತಿಂಗಳ ಅಂತ್ಯದಲ್ಲಿ ನಮ್ಮ ಮೆಟ್ರೋಗಳಲ್ಲಿ ನಂದಿನಿ ಮಳಿಗೆಗಳು ಓಪನ್ ಆಗಲಿವೆ. ಕೆಎಂಎಫ್, ಬಿಎಂಆರ್‌ಸಿಎಲ್ ಮಳಿಗೆಗಳ ಓಪನ್‌ಗೆ ಸಿದ್ಧತೆ ಮಾಡಿವೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆಗಳ ಓಪನ್‌ಗೆ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವಕಾಶ ನೀಡಿದ್ದರು. 10 ಮೆಟ್ರೋ ನಿಲ್ದಾಣಗಳಲ್ಲಿ ಓಪನ್ ಮಾಡ್ತೇವೆ ಎಂದಿದ್ದರು. ಈಗ ಪ್ರಾರಂಭಿಕವಾಗಿ 3 ಮೆಟ್ರೋ ನಿಲ್ದಾಣಗಳಲ್ಲಿ ಮಳಿಗೆಗಳ ನಿರ್ಮಾಣ ಸಿದ್ಧವಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ, ಸೆಂಟ್ರಲ್ ಕಾಲೇಜ್ ಮೆಟ್ರೋ ನಿಲ್ದಾಣ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ನಿರ್ಮಾಣ ಆಗಿದೆ. ಇದನ್ನೂ ಓದಿ: ಸಚಿವ ಬೈರತಿ ಸುರೇಶ್ ಪಿಎಸ್ ಮನೆ ಮೇಲೆ ʻಲೋಕಾʼ ದಾಳಿ – ಭಾರೀ ಪ್ರಮಾಣದ ಆಸ್ತಿ ದಾಖಲೆ ವಶಕ್ಕೆ
ಇನ್ನೂ ಈ ತಿಂಗಳ ಅಂತ್ಯ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಂದಿನಿ ಮಳಿಗೆಯು ಸಾರ್ವಜನಿಕರ ಸೇವೆಗೆ ಸಿಗಲಿದೆ. ಈ ಬಗ್ಗೆ ಕೆಎಂಎಫ್ ಎಂಡಿ ಶಿವಸ್ವಾಮಿ ಈಗಾಗಲೇ 3 ಮೆಟ್ರೋ ನಿಲ್ದಾಣಗಳಲ್ಲಿ ಸೇವೆಗೆ ಸಿದ್ಧವಾಗ್ತಿವೆ. ಮುಂದಿನ ವಾರದಲ್ಲಿ ಉದ್ಘಾಟನೆ ಮಾಡೋದಕ್ಕೆ ಪ್ಲ್ಯಾನ್ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ನಂದಿನಿ ಉತ್ಪನ್ನಗಳು ಇಲ್ಲಿ ಸಿಗಲಿವೆ. 3 ಮೆಟ್ರೋ ಸ್ಟೇಷನ್‌ಗಳನ್ನ ಹೊರತುಪಡಿಸಿ ಉಳಿದ ಕಡೆಗಳಲ್ಲೂ ಮಳಿಗೆ ತೆರೆಯಲು ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯಿಂದ ಮುಂದಿನ ಉಪರಾಷ್ಟ್ರಪತಿ ಆಯ್ಕೆ – ಮೋದಿ ವಿದೇಶಿ ಪ್ರವಾಸದ ಬಳಿಕ ಅಂತಿಮ ನಿರ್ಧಾರ
ಒಟ್ಟಾರೆ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಈ ತಿಂಗಳ ಅಂತ್ಯಕ್ಕೆ ನಂದಿನಿ ಮಳಿಗೆಗಳ ಓಪನ್ ಆಗ್ತಿದ್ದು, ಉಳಿದ ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಮಳಿಗೆ ಯಾವಾಗಿನಿಂದ ಓಪನ್ ಆಗಲಿವೆ. ಬೇರೆ ಬ್ರ್ಯಾಂಡ್‌ಗಳಿಗೆ ಮಣೆ ಹಾಕದೇ ನಂದಿನಿಗೆ ಹೆಚ್ಚು ಉತ್ತೇಜನ ನೀಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ.