ಆಪರೇಷನ್‌ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್‌ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್‌ ಏವಿಯೇಷನ್‌ ಸ್ಪಷ್ಟನೆ

Public TV
1 Min Read

ನವದೆಹಲಿ: ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತೀಯ ವಾಯುಸೇನೆ ರಫೇಲ್ ಯುದ್ಧ ವಿಮಾನವೊಂದು ಕಳೆದುಕೊಂಡಿದೆ ಎಂದು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಡಸಾಲ್ಟ್ ಏವಿಯೇಷನ್ ನಿರಾಕರಿಸಿದೆ.

ಈ ಹಿಂದೆ ಪ್ರಕಟವಾದ ಕೆಲವು ವರದಿಗಳಲ್ಲಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನ ಸಿಇಒ ಎರಿಕ್ ಟ್ರಾಪಿಯರ್ ಭಾರತೀಯ ವಾಯುಸೇನೆ ರಫೇಲ್ ಯುದ್ಧ ವಿಮಾನವೊಂದು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ರಫೇಲ್ ವಿಮಾನದ ನಷ್ಟವು ಯಾವುದೇ ಯುದ್ಧ ಕಾರ್ಯಾಚರಣೆಯ ಸಂದರ್ಭದಲ್ಲಿ ಸಂಭವಿಸಿಲ್ಲ. ಆದರೆ, ಘಟನೆಯ ಖಚಿತ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿತ್ತು.

ಆದರೆ ಈ ಬಗ್ಗೆ ಡಸಾಲ್ಟ್ ಏವಿಯೇಷನ್ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟನೆ ನೀಡಿದೆ. ಎರಿಕ್ ಟ್ರ್ಯಾಪಿಯರ್ ಇಂತಹ ಯಾವುದೇ ಕಾರ್ಯಾಚರಣೆಯ ಅಥವಾ ತಾಂತ್ರಿಕ ಹೇಳಿಕೆಗಳನ್ನು ನೀಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

Share This Article