ನಟ ದರ್ಶನ್ (Darshan) ಪ್ರಸ್ತುತ ಥಾಯ್ಲೆಂಡ್‌ನಲ್ಲಿ (Thailand) ಇದ್ದಾರೆ. ಅಲ್ಲಿನ ಫುಕೆಟ್ ಪಟ್ಟಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪತ್ನಿ ಮಗನ ಜೊತೆ ರಿಲ್ಯಾಕ್ಸ್ ಆಗಲೆಂದು ಚಿತ್ರೀಕರಣದ ಬಳಿಕವೂ ಅಲ್ಲಿಯೇ ಉಳಿದುಕೊಂಡಿದ್ದರು. ಆದರೆ ಅಸಲಿಯಾಗಿ ಅವರಿಗೆ ಅಲ್ಲಿಯೂ ನೆಮ್ಮದಿ ಇಲ್ಲದ ಸ್ಥಿತಿ. ಕಾರಣ ಇದೇ ಗುರುವಾರವೇ ಅವರ ಜಾಮೀನು ಭವಿಷ್ಯ ನಿರ್ಧಾರವಾಗುತ್ತೆ. ಒಂದುವೇಳೆ ಜಾಮೀನು ರದ್ದಾದ್ರೂ ಅಥವಾ ಜಾಮೀನು ಮುಂದುವರೆದರೂ ದರ್ಶನ್ ಮಾತ್ರ ಬೆಂಗಳೂರಿಗೆ ವಾಪಸ್ ಬರಲೇಬೇಕು. ಇದೀಗ ಜುಲೈ 25ಕ್ಕೆ ದರ್ಶನ್ ಬೆಂಗಳೂರಿಗೆ ವಾಪಸ್ಸಾಗುವ ದಿನಾಂಕ ಫಿಕ್ಸ್ ಆಗಿದೆ.
`ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆಂದು ದರ್ಶನ್ 10 ದಿನಗಳ ಮಟ್ಟಿಗೆ ಥಾಯ್ಲೆಂಡ್ ದೇಶಕ್ಕೆ ತೆರಳಿದ್ದರು. ಹಾಡಿನ ಚಿತ್ರೀಕರಣ ಮುಗಿದಿದ್ದು ಸಿನಿಮಾ ತಂಡ ವಾಪಸ್ಸಾಗಿದೆ. ಆದರೆ ದರ್ಶನ್ ಹಾಗೂ ಅವರ ಕುಟುಂಬ ಅಲ್ಲೇ ಉಳಿದುಕೊಂಡಿದೆ. ಕಾರಣ ವರ್ಷಗಳ ಬಳಿಕ ದರ್ಶನ್ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಆದರೆ ಇದೇ ವೇಳೆ ದರ್ಶನ್‌ರ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗುತ್ತೆ.
ಅದೇನೇ ಆದ್ರೂ ದರ್ಶನ್ ಥಾಯ್ಲೆಂಡ್‌ನಿಂದ ವಾಪಸ್ ಬರುವ ವಿಮಾನ ಟಿಕೆಟ್ ಅನ್ನೂ ಬುಕ್ ಮಾಡಿದ್ದು ಶುಕ್ರವಾರವೇ ವಾಪಸ್ಸಾಗಲಿದ್ದಾರೆ. ಗುರುವಾರ ಹೊರಬೀಳಲಿರುವ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಕೊಲೆ ಆರೋಪಿ ದರ್ಶನ್ ತಾತ್ಕಾಲಿಕ ನೆಮ್ಮದಿ ನಿರ್ಧಾರವಾಗುತ್ತೆ.