ದೇವಿ ಮೂರ್ತಿ ಮೇಲೆ ಕಾಲಿಟ್ಟು ಮಾಲೆ ಹಾಕಿದ ದರ್ಶನ್ ಅಭಿಮಾನಿ – ಫ್ಯಾನ್ಸ್ ಹುಚ್ಚಾಟಕ್ಕೆ ಜನಾಕ್ರೋಶ

Public TV
1 Min Read

ಬಳ್ಳಾರಿ: ಜಿಲ್ಲೆಯ ಅದಿದೇವತೆ ಕನಕದುರ್ಗಮ್ಮ ದೇವಿಯ ಬೃಹತ್ ಪ್ರತಿಮೆ ಮೇಲೆ ಕಾಲಿಟ್ಟು ಮಾಲೆ ಹಾಕಿರುವುದಕ್ಕೆ ಜನಾಕ್ರೋಶ ವ್ಯಕ್ತವಾಗಿರುವ ಘಟನೆ ಬಳ್ಳಾರಿಯಲ್ಲಿ (Ballary) ನಡೆದಿದೆ. ಕೊಲೆ ಆರೋಪಿ ದರ್ಶನ್ ಅಭಿಮಾನಿಗಳು ದೇವಿಯ ಮೇಲೆ ಕಾಲಿಟ್ಟು ಮಾಲೆ ಹಾಕಿ ಹುಚ್ಚಾಟ ಮೆರೆದಿದ್ದಾರೆ.ಇದನ್ನೂ ಓದಿ: ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ – ಕ್ಷಮೆಯಾಚಿಸಿದ ಪ್ರಧಾನಿ ಮೋದಿ

 ಕೋಟ್ಯಂತರ ಭಕ್ತರ ಆರಾಧ್ಯ ದೈವ ಶ್ರೀ ಕನಕ ದುರ್ಗಮ್ಮದೇವಿಯ ಮೇಲೆ ಕಾಲಿಟ್ಟು ಹಾರ ಹಾಕಿರುವುದು ಸರಿಯಲ್ಲ. ಮೂರ್ತಿಯ ಮೇಲೆ ಕಾಲಿಟ್ಟು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಕೊಲೆ ಆರೋಪಿ ದರ್ಶನ್ ಅಭಿಮಾನಿಗಳು (Darshan Fans) ಈ ರೀತಿ ಮಾಡಿರುವುದು ಸರಿಯಲ್ಲ. ಬೃಹತ್ ಪ್ರತಿಮೆ ಮೇಲೆ ಕಾಲಿಟ್ಟು ಮಾಲೆ ಹಾಕಬಾರದು ಎಂಬ ಕಾರಣಕ್ಕೆ ಕ್ರೇನ್ ತರಿಸಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ದೇವಸ್ಥಾನದ ಧರ್ಮದರ್ಶಿ ಗಾದೆಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ರೇನ್ ಇದ್ದರೂ ಕೂಡ ದೇವಿಯ ಪ್ರತಿಮೆ ಮೇಲೆ ಕಾಲಿಟ್ಟು ಮಾಲೆ ಹಾಕಿರುವುದು ಖಂಡನೀಯ. ಈ ಮಹಾಪರಾಧಕ್ಕೆ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯೇ ಕಾರಣ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಸೆ.2ರಂದು ‘ಮ್ಯಾಕ್ಸ್’ ಸಿನಿಮಾದ ಅಪ್‌ಡೇಟ್- ಫ್ಯಾನ್ಸ್‌ಗೆ ಗುಡ್‌ ನ್ಯೂಸ್

ಕೂಡಲೇ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Share This Article