ಸೋಮವಾರ ಥೈಲ್ಯಾಂಡ್‌ಗೆ ಹಾರಲಿದ್ದಾರೆ ದರ್ಶನ್

By
1 Min Read

ಕೊಲೆ ಕೇಸ್ ಜೊತೆ ಸಿನಿಮಾ ವಿಚಾರದಲ್ಲೂ ದರ್ಶನ್ (Darshan) ಸೌಂಡ್ ಜೋರಾಗಿದೆ. ಇದೀಗ ಡೆವಿಲ್ (Devil) ಚಿತ್ರದ ಶೂಟಿಂಗ್ ಮುಗಿಸಿರುವ ದರ್ಶನ್ ಬಾಕಿ ಇರುವ ಒಂದೇ ಒಂದು ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಅನುಮತಿ ಪಡೆದುಕೊಂಡಿದ್ದಾರೆ. ಕೋರ್ಟ್ ಆದೇಶದಂತೆ ದರ್ಶನ್ ಸೋಮವಾರ ಥಾಯ್ಲೆಂಡ್‌ಗೆ ತೆರಳಲಿದ್ದಾರೆ.

ದರ್ಶನ್‌ ಅವರು ಗುರುವಾರ ರಾತ್ರಿ ಸಿನಿಮಾ ತಂಡದ ಜೊತೆ ಥೈಲ್ಯಾಂಡ್‌ ಹೋಗಬೇಕಿತ್ತು. ಆದರೆ ಶೂಟಿಂಗ್‌ ತಂಡ ಮಾತ್ರ ಥಾಯ್ಲೆಂಡ್‌ (Thailand) ವಿಮಾನ ಹತ್ತಿರುವ ಮಾಹಿತಿ ಸಿಕ್ಕಿದೆ.

ಡೆವಿಲ್ ಚಿತ್ರದ ಡ್ಯುಯೆಟ್ ಹಾಡೊಂದರ ಚಿತ್ರೀಕರಣಕ್ಕೆ ಥೈಲ್ಯಾಂಡ್‌ ದೇಶದ ಬ್ಯಾಂಕಾಕ್, ಪುಕೆಟ್, ಕ್ರಾಬಿಯಲ್ಲಿ ದರ್ಶನ್ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು ಇದು ಕೊಲೆ ಪ್ರಕರಣದ ಬಳಿಕ ದರ್ಶನ್ ತೆರೆಳುತ್ತಿರುವ ಮೊದಲ ವಿದೇಶ ಪ್ರಯಾಣ. ಇದನ್ನೂ ಓದಿ: ದರ್ಶನ್‌ಗೆ ಮಾದರಿಯಾದ ಸಂಜು ಬಸಯ್ಯ ಪತ್ನಿಗೆ ಅಶ್ಲೀಲ ಮೆಸೇಜ್ ಕಳಿಸಿದವನಿಗೆ ಬುದ್ಧಿ ಹೇಳಿದ ನಟ

ಡೆವಿಲ್‌ ಶೂಟಿಂಗ್‌ನಲ್ಲಿ ದರ್ಶನ್‌

ಸೋಮವಾರ ಟಿಕೆಟ್ ಬುಕ್ ಆಗಿದ್ದು ಸಿನಿಮಾ ಟೀಮ್ ಜೊತೆಗೂಡಿ ತೆರಳಲಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರು ಪತಿ ಜೊತೆ ಹೋಗುವ ಸಾಧ್ಯತೆ ಇದೆ.

ಕಳೆದ ಬಾರಿ ಯುರೋಪ್ ಹಾಗೂ ದುಬೈಗೆ ತೆರೆಳಲು ದರ್ಶನ್ ಅನುಮತಿ ಪಡೆದುಕೊಂಡಿದ್ದರು. ಆದರೆ ಇಸ್ರೇಲ್‌-ಇರಾನ್‌ ಯುದ್ಧದ ಕಾರಣದಿಂದ ದರ್ಶನ್ ಆ ಜಾಗ ಬದಲಿಸಿ ಇದೀಗ ಬದಲಿ ದೇಶ ಕಂಡುಕೊಂಡಿದ್ದಾರೆ.

ಈ ತಿಂಗಳು ಕೊನೆವರೆಗೂ ದರ್ಶನ್‌ಗೆ ಥೈಲ್ಯಾಂಡ್‌ನಲ್ಲಿರಲು ಕೋರ್ಟ್ ಅನುಮತಿ ನೀಡಿದೆ . ಸೋಮವಾರ ತೆರಳಲಿರುವ ದರ್ಶನ್ ಒಂದು ವಾರ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

Share This Article