ದರ್ಶನ್ ಬಿಡುಗಡೆಗಾಗಿ ವಿಜಯಲಕ್ಷ್ಮಿ ಟೆಂಪಲ್ ರನ್

Public TV
1 Min Read

ಕೊಲೆ ಪ್ರಕರಣದ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗಾಗಿ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ದೇವರ ಮೊರೆ ಹೋಗಿದ್ದಾರೆ. ಪತಿ ದರ್ಶನ್ ಬಿಡುಗಡೆಗಾಗಿ ಪತ್ನಿ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ಮರುದಿನವೇ ತಾಯಿಯಾಗ್ತಿರುವ ಸುದ್ದಿ ಹಂಚಿಕೊಂಡ ರ‍್ಯಾಪರ್

ಆ.4ರಂದು ಭೀಮನ ಅಮವಾಸ್ಯೆ ಪ್ರಯುಕ್ತ ನಗರದ ಬನಶಂಕರಿ ದೇವಸ್ಥಾನಕ್ಕೆ ಸ್ನೇಹಿತೆ ಜೊತೆ ಭೇಟಿ ನೀಡಿದ್ದು, ವಿಜಯಲಕ್ಷ್ಮಿ ಸಂಕಲ್ಪ ಪೂಜೆ ಮಾಡಿಸಿದ್ದಾರೆ. ಈಗ ಭೇಟಿ ನೀಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ:ಬುಲ್ ಬುಲ್ ನಿರ್ದೇಶಕನ `ಜಂಬೂ ಸರ್ಕಸ್’ ಟೀಸರ್ ಬಿಡುಗಡೆ

ಕಳೆದ ವಾರವಷ್ಟೇ ಕೊಲ್ಲೂರು ಮೂಕಾಂಬಿಕಾ ದೇವಿಗೆ ನವ ಚಂಡಿಕಾ ಯಾಗ ಮಾಡಿಸಿದ್ದರು ವಿಜಯಲಕ್ಷ್ಮಿ. ಅದೇ ದಿನ ದಿನಕರ್ ತೂಗುದೀಪ್ ಕೂಡ ಮೈಸೂರಿನ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದರು.

Share This Article