ತಡವಾದ್ರೂ ಈ ಸೆಲೆಬ್ರೇಷನ್ ಪ್ರೀತಿಯಿಂದ ತುಂಬಿದೆ – ಹೊಸ ಪೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮಿ

Public TV
1 Min Read

ನಟ ದರ್ಶನ್‌ ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಫುಲ್‌ ಖುಷ್‌ ಆಗಿರುವ ಪತ್ನಿ ವಿಜಯಲಕ್ಷ್ಮಿ (Vijayalakshmi) ಸೋಷಿಯಲ್‌ ಮೀಡಿಯಾದಲ್ಲಿ ಫುಲ್‌ ಆಕ್ಟೀವ್‌ ಆಗಿದ್ದಾರೆ. ಹೊಸ ಹೊಸ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೊಂದು ಪೋಸ್ಟ್‌ ಹಂಚಿಕೊಂಡಿದ್ದು, ಇದು ಅಭಿಮಾನಿಗಳ ಸಂತಸಕ್ಕೂ ಕಾರಣವಾಗಿದೆ.

ಹೃದಯ ಆಕಾರವಿರುವ ಕೆಂಪು ಬಲೂನ್‌ಗಳ ಮುಂದೆ ನಿಂತು ವಿಜಯಲಕ್ಷ್ಮಿ ಪೋಸ್‌ ಕೊಟ್ಟಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಇದರೊಂದಿಗೆ ಕಾಯುವಿಕೆಗೆ ಫಲವಿದೆ… ತಡವಾದ್ರೂ ಈ ಸೆಲೆಬ್ರೇಷನ್ ಪ್ರೀತಿಯಿಂದ ತುಂಬಿದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ದರ್ಶನ್ ಜೊತೆ ಕಾಲ ಕಳೆಯುತ್ತಿರುವ ವಿಜಯಲಕ್ಷ್ಮಿ ಫುಲ್ ಖುಷ್ ಅಗಿದ್ದಾರೆ. ಪ್ರತಿ ಕ್ಷಣ ಎಂಜಾಯ್ ಮಾಡ್ತಿರುವ ಒಂದಿಲ್ಲೊಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

 

Share This Article