ಹಸಿರು ಡ್ರೆಸ್ ಧರಿಸಿ ಪೋಸ್ ಕೊಟ್ಟ ದರ್ಶನ್ ಪತ್ನಿ

Public TV
1 Min Read

ಸ್ಯಾಂಡಲ್‌ವುಡ್ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ಹೊಸ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ನಯಾ ಲುಕ್‌ಗೆ ಫ್ಯಾನ್ಸ್ ನಾನಾ ಕಾಮೆಂಟ್‌ಗಳನ್ನು ಶೇರ್ ಮಾಡಿದ್ದಾರೆ. ಇದನ್ನೂ ಓದಿ:BBK 11: ಒಳ್ಳೆಯ ಸಂಗಾತಿ ಸಿಗುತ್ತಾಳೆ- ಮಂಜು ಮದುವೆ ಬಗ್ಗೆ ಭವಿಷ್ಯ ನುಡಿದ ಗುರೂಜಿ

ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ದರ್ಶನ್‌ಗೆ ಕೊಲೆ ಕೇಸ್‌ನಲ್ಲಿ ರೆಗ್ಯೂಲರ್ ಬೇಲ್ ಸಿಕ್ಕ ಮೇಲೆ ವಿಜಯಲಕ್ಷ್ಮಿ ಕೊಂಚ ರಿಲೀಫ್ ಆಗಿದ್ದಾರೆ. ಒಂದಲ್ಲಾ ಒಂದು ಫೋಟೋಸ್ ಶೇರ್ ಮಾಡುತ್ತಲೇ ಇರುತ್ತಾರೆ. ಈಗ ಹಸಿರು ಬಣ್ಣದ ಡ್ರೆಸ್ ಧರಿಸಿ ಅವರು ಮಿಂಚಿದ್ದಾರೆ. ನಮ್ಮ ಅತ್ತಿಗೆ ಬೆಸ್ಟ್ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ.

ಕಲರ್‌ಫುಲ್ ಲೈಟ್ಸ್ ಮಧ್ಯೆ ಸೋಫಾದಲ್ಲಿ ಕುಳಿತು ಫೋಟೋಗೆ ದರ್ಶನ್‌ ಪತ್ನಿ ಪೋಸ್ ಕೊಟ್ಟಿದ್ದಾರೆ. ಇದು ಡಿಬಾಸ್ ಅಭಿಮಾನಿಗಳ ಗಮನ ಸೆಳೆದಿದೆ.

ಇನ್ನೂ ಜ.14ರಂದು ದರ್ಶನ್ ಸಂಕ್ರಾಂತಿ ಹಬ್ಬವನ್ನು ಕುಟುಂಬದ ಜೊತೆ ಆಚರಣೆ ಮಾಡಿದ್ದರು. ಮೈಸೂರಿನಲ್ಲಿ ಹಬ್ಬ ಮಾಡಿ ಸಂಭ್ರಮಿಸಿದ್ದರು. ಈಗ ಫ್ಯಾಮಿಲಿ ಬೆಂಗಳೂರಿನಲ್ಲಿದ್ದಾರೆ. ಇನ್ನೂ ಸದ್ಯದಲ್ಲೇ ‘ಡೆವಿಲ್’ ಸಿನಿಮಾದ ಶೂಟಿಂಗ್ ಶುರು ಆಗುವ ಬಗ್ಗೆ ಅಪ್‌ಡೇಟ್ ಸಿಗಲಿದೆ.

Share This Article