– ಸುವರ್ಣಾವತಿ ಡ್ಯಾಂ ಬಳಿ ಟೋಲ್ ದಾಟಿರುವ ವೀಡಿಯೋ ವೈರಲ್
ಚಾಮರಾಜನಗರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಸುಪ್ರೀಂ ಕೋರ್ಟ್ (Supreme Court) ತೀರ್ಪಿಗೂ ಹಿಂದಿನ ದಿನ ಅಂದರೆ ಬುಧವಾರ ನಟ ದರ್ಶನ್ (Darshan) ಬನ್ನಾರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.
ಜಾಮೀನು ರದ್ದು ಆದೇಶ ಹೊರಬಿದ್ದ ಬೆನ್ನಲ್ಲೇ ನಟ ದರ್ಶನ್‌ಗಾಗಿ ಪೊಲೀಸರು ಎಲ್ಲಾ ಕಡೆ ಹುಡುಕುತ್ತಿದ್ದಾರೆ. ಆರ್‌ಆರ್ ನಗರ, ಹೊಸಕೆರೆಹಳ್ಳಿ ಹಾಗೂ ಮೈಸೂರಿನ ಫಾರಂ ಹೌಸ್‌ನಲ್ಲೂ ಪೊಲೀಸರು ದರ್ಶನ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ದರ್ಶನ್ ಎಲ್ಲೂ ಪತ್ತೆಯಾಗಿಲ್ಲ. ತೀರ್ಪಿನ ಹಿಂದಿನ ದಿನ ಅಂದರೆ ಬುಧವಾರ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಡ್ಯಾಂ ಬಳಿಯ ಟೋಲ್ ಗೇಟ್ ಮೂಲಕ ದರ್ಶನ್ ಪ್ರಯಾಣಿಸಿರುವ ವಾಹನಗಳ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗ್ತಾರಾ ದರ್ಶನ್?
ಟೋಲ್ ಮೂಲಕ ದರ್ಶನ್ ವಾಹನ ತೆರಳಿರುವ ವೀಡಿಯೋವನ್ನು ‘ಡಿ ಬಾಸ್’ ಎಂದು ಅಭಿಮಾನಿಗಳು ಸ್ಟೇಟಸ್‌ಗಳಲ್ಲಿ ಹಾಕಿಕೊಂಡಿದ್ದಾರೆ. ರಾತ್ರಿ ಮೈಸೂರು ಸಮೀಪದ ತಮ್ಮ ಫಾರಂ ಹೌಸ್‌ನಲ್ಲಿದ್ದ ದರ್ಶನ್ ಇಂದು ಬೆಳ್ಳಂಬೆಳಗ್ಗೆ ತಮಿಳುನಾಡಿಗೆ ಪ್ರಯಾಣ ಬೆಳೆಸಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡು ಕಡೆ ಹೋಗಿದ್ದಾರೆ ಅಂತಾ ಒಂದು ಮಾಹಿತಿ ಇದ್ದರೆ ಮತ್ತೊಂದು ಮಾಹಿತಿ ಪ್ರಕಾರ ಮಡಿಕೇರಿಯ ಶುಂಠಿಕೊಪ್ಪ ಭಾಗಕ್ಕೆ ತೆರಳಿದ್ದಾರೆ ಎನ್ನಲಾಗ್ತಿದೆ. ಇದನ್ನೂ ಓದಿ: ನಟ ದರ್ಶನ್‌ಗೆ ಪೊಲೀಸರ ತೀವ್ರ ಶೋಧ – ಮೈಸೂರಿನ ಮನೆ, ಫಾರ್ಮ್‌ಹೌಸ್‌ನಲ್ಲಿ ಹುಡುಕಾಟ
ಇನ್ನು ದರ್ಶನ್ ಬೇಲ್ ರದ್ದು ಹಿನ್ನೆಲೆ ದರ್ಶನ್ ಬಟ್ಟೆ ತೆಗೆದುಕೊಂಡು ಹೋಗಲು ಅಳಿಯ ಚಂದನ್ ಆರ್‌ಆರ್ ನಗರದ ನಿವಾಸಕ್ಕೆ ಆಗಮಿಸಿದ್ದಾರೆ. ದರ್ಶನ್ ಬಟ್ಟೆ ಇರುವ ಸೂಟ್ ಕೇಸ್ ತೆಗೆದುಕೊಂಡ ಚಂದನ್ ಅದನ್ನು ಕಾರಿನಲ್ಲಿ ಇಟ್ಟುಕೊಂಡು ಮನೆಯಿಂದ ತೆರಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯ ತೊರೆದಿದ್ದಾರಾ ಕೊಲೆ ಆರೋಪಿ ದರ್ಶನ್?