ದರ್ಶನ್‌ ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರ ನ.22ಕ್ಕೆ ರೀ ರಿಲೀಸ್‌

Public TV
1 Min Read

ರ್ಶನ್ (Darshan) ನಟನೆಯ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ (Krantiveera Sangolli Rayanna) ಸಿನಿಮಾ ಮತ್ತೆ ಮರು ಬಿಡುಗಡೆಗೆ ಸಿದ್ಧವಾಗಿದೆ. ಇದೇ ನ.22ರಂದು ದರ್ಶನ್ ನಟಿಸಿರುವ ಸಿನಿಮಾ ರಿಲೀಸ್ ಆಗಲಿದೆ. ಇದನ್ನೂ ಓದಿ:ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

ನಾಗಣ್ಣ ನಿರ್ದೇಶನದ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾದಲ್ಲಿ ಜಯಪ್ರಧ, ನಿಕಿತಾ, ಉಮಾಶ್ರೀ ಸೇರಿದಂತೆ ಅನೇಕರು ನಟಿಸಿದರು. 2012ರಲ್ಲಿ ತೆರೆಕಂಡ ಈ ಸಿನಿಮಾವನ್ನು ಆನಂದ್ ಬಿ. ಅಪ್ಪುಗೋಳ್ ನಿರ್ಮಾಣ ಮಾಡಿದ್ದರು. ಇದೀಗ ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಆಧರಿಸಿದ ಸಿನಿಮಾ ಮತ್ತೆ ರಿಲೀಸ್‌ಗೆ ಸಿದ್ಧವಾಗಿದೆ.

ಈಗಾಗಲೇ ದರ್ಶನ್ ಅಭಿನಯಿಸಿದ್ದ ಶಾಸ್ತ್ರಿ, ಕರಿಯ, ನವಗ್ರಹ, ಪೊರ್ಕಿ ಸಿನಿಮಾಗಳು ಇದೇ ವರ್ಷ ರೀ ರಿಲೀಸ್ ಆಗಿತ್ತು. ಇದೀಗ ಆಧುನಿಕ ತಂತ್ರಜ್ಞಾನ ಸ್ಪರ್ಷದೊಂದಿಗೆ ಐತಿಹಾಸಿಕ ಸಿನಿಮಾ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆಗೆ ಸಜ್ಜಾಗಿದೆ. ಶಾಲಾ ರಜಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಪ್ರವೇಶ ದರದಲ್ಲಿ ಶೇ. 50% ರಿಯಾಯಿತಿ ಸಹ ಇರಲಿದೆ. ಈ ಚಿತ್ರವನ್ನು ಎಸ್‌ಜಿಕೆ ಫಿಲಂಸ್ ಮೂಲಕ ಕೆ.ಬಸವರಾಜ್ ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ.

Share This Article