ಅನುಕ್ತ ಟ್ರೈಲರ್ ನೋಡಿ ದರ್ಶನ್ ಹೇಳಿದ್ದೇನು?

Public TV
1 Min Read

ಬೆಂಗಳೂರು: ಅನುಕ್ತ ಚಿತ್ರ ಇದೇ ಫೆಬ್ರವರಿ ಒಂದರಂದು ರಾಜ್ಯಾದ್ಯಂತ ತೆರೆ ಕಾಣಲು ರೆಡಿಯಾಗಿದೆ. ಚಿತ್ರೀಕರಣ ಆರಂಭವಾದಾಗಿನಿಂದ ಈವರೆಗೂ ಈ ಸಿನಿಮಾ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿ ಕೇಂದ್ರದಲ್ಲಿದೆ. ಇದರ ಪ್ರೋಮೋ, ಟೀಸರ್, ಟ್ರೈಲರ್ ಮತ್ತು ಹಾಡುಗಳು ಚಿತ್ರರಂಗದ ಮಂದಿಯನ್ನೂ ಕೂಡಾ ಸೆಳೆದುಕೊಂಡಿದೆ. ಅನೇಕ ನಟ ನಟಿಯರು ಈ ಬಗ್ಗೆ ಸಕಾರಾತ್ಮಕವಾಗಿಯೇ ಮಾತಾಡಿದ್ದಾರೆ. ಇದೀಗ ಅನುಕ್ತದ ಟ್ರೈಲರ್ ನೋಡಿ ಖುಷಿಗೊಂಡಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಚಿತ್ರದ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ.

ತಾವು ಅದೆಷ್ಟೇ ಬ್ಯುಸಿಯಾಗಿದ್ದರೂ ಹೊಸಬರ, ಹೊಸತನದ ಪ್ರಯೋಗಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲೋದು ದರ್ಶನ್ ಅವರ ಸ್ಪೆಷಾಲಿಟಿ. ಅವರು ಸದಾ ಈ ಬಗ್ಗೆ ಒಂದು ಕಣ್ಣಿಟ್ಟೇ ಇರುತ್ತಾರೆ. ಅದೇ ರೀತಿ ಅವರು ಅನುಕ್ತ ಚಿತ್ರದ ಪ್ರೋಮೋದಿಂದ ಹಿಡಿದು ಹಾಡುಗಳ ವರೆಗೆ ಎಲ್ಲವನ್ನೂ ಗಮನಿಸಿಕೊಂಡೇ ಬಂದಿದ್ದರಂತೆ.

ಕನ್ನಡ ಚಿತ್ರರಂಗದಲ್ಲಿ ಕಮರ್ಶಿಯಲ್ ಚಿತ್ರಗಳ ಜೊತೆಗೇ ಕಮರ್ಶಿಯಲ್ ಮೆಥಡ್ಡಿನಲ್ಲಿಯೇ ಇಂಥಾ ಹೊಸಾ ಪ್ರಯತ್ನಗಳೂ ಆಗುತ್ತಿರಬೇಕು ಅಂದಿರೋ ದರ್ಶನ್ ಅವರಿಗೆ ಆರಂಭದಲ್ಲಿ ಅನುಕ್ತದ ಅರ್ಥವೇ ಸಿಕ್ಕಿರಲಿಲ್ಲವಂತೆ. ಅದೊಂದು ಸಂಸ್ಕೃತ ಪದ ಅಂದುಕೊಂಡಿದ್ದ ಅವರಿಗೆ ಅದರ ಅರ್ಥವನ್ನು ಚಿತ್ರತಂಡವೇ ಹೇಳಿದೆ. ಒಟ್ಟಾರೆಯಾಗಿ ಇದೊಂದು ಒಳ್ಳೆ ಪ್ರಯತ್ನ, ಯಶ ಸಿಗಲಿ ಅಂತ ದರ್ಶನ್ ಹಾರೈಸಿದ್ದಾರೆ.

ದರ್ಶನ್ ಅವರ ಈ ಮಾತುಗಳೇ ಬಿಡುಗಡೆಯ ಹೊಸ್ತಿಲಲ್ಲಿರೋ ಈ ಚಿತ್ರದ ತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ. ಮತ್ತಷ್ಟು ಪ್ರೇಕ್ಷಕರು ಅನುಕ್ತದತ್ತ ಆಕರ್ಷಿತರಾಗುವಂತೆಯೂ ಮಾಡಿರೋದು ಸುಳ್ಳಲ್ಲ!

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *