ದರ್ಶನ್ ಫಾರಂ ಹೌಸ್‌ನಲ್ಲಿ ಸಂಕ್ರಾಂತಿ ಸಂಭ್ರಮ

Public TV
1 Min Read

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಮನೆಯಲ್ಲಿ ಮಕರ ಸಂಕ್ರಾಂತಿ (Makar Sankranti Festival) ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು (ಜ.14) ಫಾರಂ ಹೌಸ್‌ನಲ್ಲಿ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಲಿದ್ದಾರೆ. ಅದಕ್ಕಾಗಿ ಭರ್ಜರಿ ತಯಾರಿ ನಡೆದಿದೆ. ಇದನ್ನೂ ಓದಿ:BBK 11: ವರಸೆ ಬದಲಿಸಿದ ಭವ್ಯಾಗೆ ಪುಂಗಬೇಡ ಎಂದ ತ್ರಿವಿಕ್ರಮ್‌

ಇಂದು ಫಾರಂ ಹೌಸನಲ್ಲಿ ನಟ ದರ್ಶನ್ ಸಂಕ್ರಾಂತಿ ಹಬ್ಬ ಆಚರಿಸಲಿದ್ದಾರೆ. ಈ ಹಿನ್ನೆಲೆ ಹಬ್ಬ ಆಚರಣೆಗೂ ಮುನ್ನ ತಾಯಿಯನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ತಾಯಿ ಮೀನಾ ತೂಗುದೀಪ ಜೊತೆ ನಟ ಕಾಲ ಕಳೆದಿದ್ದಾರೆ. ತೋಟಕ್ಕೆ ಹೋಗುವ ಮುನ್ನ ತಾಯಿ ಆಶೀರ್ವಾದ ಪಡೆದು ನಟ ತೆರಳಿದ್ದಾರೆ.

ಫಾರಂ ಹೌಸ್‌ನಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಲು ತಯಾರಿ ಮಾಡಲಾಗಿದ್ದು, ನಟ ಸಾಕು ಪ್ರಾಣಿಗಳಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಹಸುಗಳಿಗೆ ದರ್ಶನ್ ತೋಟದಲ್ಲೇ ಕಿಚ್ಚು ಹಾಯಿಸಲಿದ್ದಾರೆ. ತೋಟದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಹಬ್ಬದೂಟ ಮಾಡಿಸಲಾಗಿದೆ.

Share This Article