ಬಂಧನ ಬಳಿಕ ದರ್ಶನ್, ಪವಿತ್ರಾ ಗೌಡ ಮೊದಲ ಫೋಟೋ ವೈರಲ್

Public TV
1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ (Renukaswamy Murder Case) ಮತ್ತೆ ಜೈಲುಪಾಲಾಗಿರೋ ದರ್ಶನ್ (Darshan), ಪವಿತ್ರಾಗೌಡ (Pavithra Gowda) ಅವರ ಫೋಟೋ ವೈರಲ್ ಆಗಿದೆ. ತಮಿಳುನಾಡಿನ ಬನ್ನಾರಿ ದೇಗುಲದಲ್ಲಿ ದರ್ಶನ್ ಮುಡಿಕೊಟ್ಟಿದ್ದಾರೆ.

ಇನ್ನು, ದರ್ಶನ್&ಗ್ಯಾಂಗ್‌ಗೆ ಮತ್ತಷ್ಟು ಟೆನ್ಷನ್ ಶುರುವಾಗಿದೆ. ಸುಪ್ರೀಂ ಕೋರ್ಟ್‌ನಿಂದ ಬೇಲ್ ರದ್ದಾದ ಶಾಕ್‌ನಿಂದ ಹೊರಬರೋ ಮುನ್ನವೇ ಪೊಲೀಸರು ಫಾಸ್ಟ್ರ್ಯಾಕ್ ಕೋರ್ಟ್ ರಚಿಸಲು ಸೋಮವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ಸೂಚಿಸಿದ್ದು ಬೇಗ ಟ್ರಯಲ್ ಮುಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಸಾಧಕ-ಬಾಧಕಗಳನ್ನೂ ಕಾನೂನು ಇಲಾಖೆ ಜೊತೆ ಪೊಲೀಸರು ಚರ್ಚಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ ಬಿಜೆಪಿಯ ಸೃಷ್ಟಿ: ಈಶ್ವರ್‌ ಖಂಡ್ರೆ ಬಾಂಬ್‌

ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲಾಧಿಕಾರಿಗಳು ಕೋರ್ಟ್ಗೆ ಮನವಿ ಸಲ್ಲಿಸೋ ಸಾಧ್ಯತೆ ಇದೆ. ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳ ಜೊತೆ ದರ್ಶನ್ ಸಂಪರ್ಕ ಬೆಳೆಸಿದ್ದಲ್ಲದೇ ರಾಜಾತಿಥ್ಯ ಪಡೆದಂಥ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ. ಹೀಗಾಗಿ ಬಳ್ಳಾರಿ ಜೈಲಿಗೆ ಶಿಫ್ಟ್ಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇನ್ನು ಪರಪ್ಪನ ಅಗ್ರಹಾರದಲ್ಲಿ ಎರಡು ದಿನ ಕಳೆದಿರೋ ದರ್ಶನ್ ಸಿಬ್ಬಂದಿ ಹಾಗೂ ಸಹಚರರ ಜೊತೆ ಸಹಜವಾಗೇ ಇದ್ದಾರಂತೆ. ಹೈಕೋರ್ಟ್ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಬೇಸರ ವ್ಯಕ್ತಪಡಿಸಿದಾಗಲೇ ಬೇಲ್ ರದ್ದಾಗುವ ಮುನ್ಸೂಚನೆ ಇತ್ತು. ಹೀಗಾಗಿ ಮೊದಲೇ ಮಾನಸಿಕವಾಗಿ ಸಿದ್ಧವಾಗಿದ್ದೆ ಅಂತ ಹೇಳಿಕೊಂಡಿದ್ದಾರಂತೆ. ಪೂರ್ವ ಸಿದ್ಧತೆಯೇನೋ ಎಂಬಂತೆ ಜೈಲಿಗೆ ಹೋಗುವ ಮುನ್ನವೇ ವಿಗ್ ತೆಗೆದು ಮುಡಿ ತೆಗೆಸಿದ್ದಾರೆ. ಇನ್ನು ಪರಪ್ಪನ ಅಗ್ರಹಾರ ಜೈಲು ಬಳಿ ಬರೋ ಅಭಿಮಾನಿಗಳಿಗೆ ಪೊಲೀಸರು ಕೇಸ್ ಹಾಕುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಾಸಕ ಶಿವಗಂಗಾಗೆ ನೋಟಿಸ್ ನೀಡಲಾಗುವುದು: ಡಿಕೆಶಿ

Share This Article