ಉತ್ತರಕಾಂಡ ತಂಡದಿಂದ ಆ.22ಕ್ಕೆ ‘ಗಬ್ರು ಸತ್ಯ’ನ ದರ್ಶನ

Public TV
2 Min Read

ಡಾಲಿ ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದ ಶೂಟಿಂಗ್ ಶುರುವಾಗಿದೆಯೋ ಇಲ್ಲವೋ ಮಾಹಿತಿ ಇಲ್ಲ. ಆದರೆ, ಆಗಾಗ್ಗೆ ಚಿತ್ರದ ಪೋಸ್ಟರ್ ರಿಲೀಸ್ ಮಾಡುತ್ತಾ ಸಿನಿಮಾದ ಅಪ್ ಡೇಟ್ ನೀಡುತ್ತಲೇ ಇರುತ್ತದೆ ಚಿತ್ರತಂಡ. ಈ ಸಿನಿಮಾದಲ್ಲಿ ಧನಂಜಯ್ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆ ಪೋಸ್ಟರ್ ಆಗಸ್ಟ್ 22ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಆ ಲುಕ್ ಹೇಗೆ ಇರಲಿದೆ ಎನ್ನುವ ಕುತೂಹಲ ಹೆಚ್ಚಾಗಿ. ಅವರ ಪಾತ್ರಕ್ಕೆ ಗಬ್ರು ಸತ್ಯ ಎಂದು ಹೆಸರಿಡಲಾಗಿದೆ.

ಉತ್ತರಕಾಂಡದಲ್ಲಿ ರಮ್ಯಾ ಜೊತೆ ದಿಗಂತ್

ಕೆ ವರ್ಷಗಳ ಹಿಂದೆ ತೆರೆಕಂಡನಾಗರಹಾವುಚಿತ್ರದಲ್ಲಿ ರಮ್ಯಾ (Ramya) ಮತ್ತು ದಿಗಂತ್ (Digant) ಒಟ್ಟಿಗೆ ನಟಿಸಿದ್ದರು. ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಿನಿಮಾ 2017ರಲ್ಲಿ ಬಿಡುಗಡೆ ಆಗಿತ್ತುಇದೀಗ ಮತ್ತೆ ರಮ್ಯಾ ಹಾಗೂ ದಿಂಗತ್ ಅವರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಗುತ್ತಿದೆ.

ಡಾಲಿ ಧನಂಜಯ್ ನಟನೆಯ ಉತ್ತರಕಾಂಡ (Uttarkanda) ಸಿನಿಮಾ ಮೂಲಕ ಮೋಹಕ ತಾರೆ ರಮ್ಯಾ ಮತ್ತೆ ನಟಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈಗ ಅದೇ ಸಿನಿಮಾದಲ್ಲಿ ದಿಗಂತ್ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರತಂಡವಾಗಲಿ ಅಥವಾ ದಿಗಂತ್ ಆಗಲಿ ಅಧಿಕೃತವಾಗಿ ಹೇಳಿಕೊಳ್ಳದೇ ಇದ್ದರೂ, ಸುದ್ದಿಯಂತೂ ಭರ್ಜರಿ ಸೇಲ್ ಆಗುತ್ತಿದೆ.

ವಿಜಯ್ ಕಿರಗಂದೂರು ಅರ್ಪಿಸುವ,ಕೆ.ಆರ್.ಜಿ ಸ್ಟುಡಿಯೋಸ್ ಲಾಂಛನದಲ್ಲಿ ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿರುವಉತ್ತರಕಾಂಡಚಿತ್ರದ ನಾಯಕನಾಗಿ ಡಾಲಿ ಧನಂಜಯ (Dolly Dhananjay) ಅಭಿನಯಿಸುತ್ತಿದ್ದಾರೆ. ಹಿಂದೆ ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣದಲ್ಲಿ ಡಾಲಿ ಧನಂಜಯ ನಾಯಕನಾಗಿ ನಟಿಸಿದ್ದರತ್ನನ ಪ್ರಪಂಚಚಿತ್ರ ಸಹ ಪ್ರಚಂಡ ಯಶಸ್ಸು ಕಂಡಿತ್ತು. ಇದೇ ಕಾಂಬಿನೇಶನ್ ನಲ್ಲಿ ಹೊಯ್ಸಳ ಚಿತ್ರ ಸಹ ಬಂದಿತ್ತು, ಮೂರನೇ ಚಿತ್ರವಾಗಿ ಉತ್ತರಕಾಂಡ ನಿರ್ಮಾಣವಾಗಲಿದೆ. ಇದನ್ನೂ ಓದಿ:ನಿರ್ದೇಶಕನಾದ ‘ಗೊಂಬೆಗಳ ಲವ್’ ಹೀರೋ ಅರುಣ್

ದಯವಿಟ್ಟು ಗಮನಿಸಿ,  ರತ್ನನ ಪ್ರಪಂಚದಂತಹ ವಿಭಿನ್ನ ಚಿತ್ರಗಳ ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಆದರೆ ನಾಯಕ ಯಾರು ಎಂಬ ಕುತೂಹಲವಿತ್ತು‌. ಕುತೂಹಲಕ್ಕೆ ನಂತರ ತೆರೆ ಬಿದ್ದಿತ್ತು. ಧನಂಜಯ ಅವರ ಹುಟ್ಟುಹಬ್ಬದ ದಿನದಂದೇ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆ ಸುದ್ದಿಯನ್ನು ಹಂಚಿಕೊಂಡು, ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿತ್ತು.

 

ಉತ್ತರ ಕಾಂಡ ಸಿನಿಮಾ ಉತ್ತರ ಕರ್ನಾಟಕದ ಗ್ಯಾಂಗ್ ಸ್ಟರ್ ಕಥೆ ಆಧರಿಸಿದೆ.‌ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆಯುತ್ತದೆ. ಜನವರಿಯಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗುತ್ತದೆ ಎಂದು ನಿರ್ದೇಶಕ ರೋಹಿತ್   ತಿಳಿಸಿದ್ದರು. ಆದರೆ ಇನ್ನೂ ಆಗಿಲ್ಲ. ಚರಣ್ ರಾಜ್ ಉತ್ತರ ಕಾಂಡ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸ್ವಾಮಿ  ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್  ಸಂಕಲನ ಹಾಗೂ ವಿಶ್ವಾಸ್ ಅವರ ಕಲಾ ನಿರ್ದೇಶನವಿರುತ್ತದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್