BBK 11: ಕಿಚ್ಚನ ಶೋನಲ್ಲಿ ದರ್ಶನ್ ನಟನೆಯ ‘ನವಗ್ರಹ’ ರೀ ರಿಲೀಸ್ ವಿಚಾರ ಚರ್ಚೆ

Public TV
1 Min Read

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಸಾಮಾನ್ಯವಾಗಿ ಹೊರಗಿನ ವಿಚಾರ ಸ್ಪರ್ಧಿಗಳಿಗೆ ಸಿಗುವುದಿಲ್ಲ. ಇದೀಗ ಸುದೀಪ್ (Sudeep) ತಾಯಿಯ ನಿಧನದ ಸುದ್ದಿ ಸಿಕ್ಕ ಬೆನ್ನಲ್ಲೇ ದರ್ಶನ್ (Darshan) ನಟನೆಯ ‘ನವಗ್ರಹ’ (Navagraha) ಮರುಬಿಡುಗಡೆಯ ಬಗ್ಗೆ ಶೋನಲ್ಲಿ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ನನ್ನ ವೃತ್ತಿ, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ: ವಿಜಯ್ ಪವರ್‌ಫುಲ್ ಸ್ಪೀಚ್

ಸುದೀಪ್ (Sudeep) ಅನುಪಸ್ಥಿತಿಯಲ್ಲಿ ಈ ವಾರಾಂತ್ಯ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ (Srujan Lokesh) ಅತಿಥಿಗಳಾಗಿ ಬಿಗ್ ಬಾಸ್‌ಗೆ ಆಗಮಿಸಿದ್ದರು. ಸೃಜನ್ ಆಗಮಿಸಿದ್ದು, ಧರ್ಮಗೆ ಖುಷಿಯಾಗಿದೆ. ಈ ಹಿಂದೆ ಇಬ್ಬರೂ ಜೊತೆಯಾಗಿ ಸಿನಿಮಾ ಮಾಡಿದ್ದಾರೆ.

ದೊಡ್ಮನೆಗೆ ಅತಿಥಿಯಾಗಿ ಬರುತ್ತಿದ್ದಂತೆ ಯಾರ ಪರಿಚಯ ತಮಗೆ ಮೊದಲೇ ಇದೆ ಎಂಬುದನ್ನು ಹೇಳಿದರು. ಆಗ ಧರ್ಮ (Dharma Keerthiraj) ಬಳಿ ನಿಮಗೆ ಒಂದು ಗುಡ್ ನ್ಯೂಸ್ ಇದೆ ಎಂದರು ಸೃಜನ್. ‘ನವಗ್ರಹ’ ಸಿನಿಮಾ ಮತ್ತೆ ರೀ-ರಿಲೀಸ್ ಆಗುತ್ತಿದೆ. ಇದನ್ನು ಕೇಳಿ ಯಾವಾಗ ಎಂದು ಪ್ರಶ್ನೆ ಮಾಡಿದರು. ನವೆಂಬರ್ 8ಕ್ಕೆ ಎಂದು ಸೃಜನ್ (Srujan Lokesh) ಉತ್ತರ ಕೊಟ್ಟರು. ಇದನ್ನು ಕೇಳಿ ಧರ್ಮ ಖುಷಿಪಟ್ಟರು. ಈ ಮೂಲಕ ಬಿಗ್ ಬಾಸ್ ಮನೆಯೊಳಗೂ ನವಗ್ರಹ ಚಿತ್ರದ್ದೇ ಚರ್ಚೆಯಾಗಿದೆ.

ಅಂದಹಾಗೆ, ದರ್ಶನ್ ನಟನೆಯ ‘ನವಗ್ರಹ’ ಸಿನಿಮಾ 16 ವರ್ಷಗಳ ಹಿಂದೆ 2008ರ ನವೆಂಬರ್ 7ರಂದು ರಿಲೀಸ್ ಆಗಿತ್ತು. ದರ್ಶನ್ ಜೊತೆ ಸೃಜನ್ ಲೋಕೇಶ್, ಧರ್ಮ ಕೀರ್ತಿರಾಜ್, ಶರ್ಮಿಳಾ ಮಾಂಡ್ರೆ, ವರ್ಷಾ, ತರುಣ್ ಸುಧೀರ್, ವಿನೋದ್ ಪ್ರಭಾಕರ್ ನಟಿಸಿದರು. ದಿನಕರ್ ತೂಗುದೀಪ ನಿರ್ದೇಶನ ಮಾಡಿದ್ದರು. ಇದೀಗ ಇದೇ ನ.8ಕ್ಕೆ ಸಿನಿಮಾ ಮರುಬಿಡುಗಡೆ ಆಗುತ್ತಿದೆ.

Share This Article