ದುಬಾರಿ ಬೆಲೆಯ ಜೀನ್ಸ್ ಪ್ಯಾಂಟ್ ಧರಿಸಿ ಖರ್ಚು ಕಡಿಮೆ ಮಾಡಿದ ದರ್ಶನ್

Public TV
2 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಂಪಲ್ ಬಟ್ಟೆ ಧರಿಸುತ್ತಾರೆ ಎಂಬುದು ಗೊತ್ತಿರುವ ವಿಚಾರ. ಹೆಚ್ಚು ಬೆಲೆಯ ಬಟ್ಟೆ ಧರಿಸುವುದಿಲ್ಲ ಎಂದು ಕೆಲವು ಬಾರಿ ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಧರಿಸುವ ಜೀನ್ಸ್ ಪ್ಯಾಂಟ್ ಬೆಲೆ 50 ಸಾವಿರದಿಂದ 1 ಲಕ್ಷ ರೂ.ಗಳದ್ದಾಗಿದೆ ಎಂಬುದು ಇದೀಗ ರಿವೀಲ್ ಆಗಿದೆ.

ಡಿ ಬಾಸ್ 50 ಸಾವಿರದಿಂದ 1 ಲಕ್ಷದ ವರೆಗಿನ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಆದರೆ ತಮಗಾಗಿಯಲ್ಲ, ಬದಲಿಗೆ ಸಿನಿಮಾಗಾಗಿ. ಬಹುನಿರೀಕ್ಷಿತ ರಾಬರ್ಟ್ ಸಿನಿಮಾದಲ್ಲಿ ಇಷ್ಟು ಬೆಲೆಯ ಪ್ಯಾಂಟ್‍ನ್ನು ಡಿ ಬಾಸ್ ಧರಿಸಿದ್ದರು. ಅಲ್ಲದೆ ಇನ್ನೂ ಹೆಚ್ಚಿನ ಹಣವನ್ನು ಡಿ ಬಾಸ್ ನಿರ್ಮಾಪಕರಿಗೆ ಉಳಿತಾಯ ಮಾಡಿದ್ದರಂತೆ.

ಇತ್ತೀಚಿಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರು ದರ್ಶನ್ ಕುರಿತ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾನು ಟ್ರು ರಿಲಿಜಿಯನ್ಸ್ ಬ್ರ್ಯಾಂಡ್‍ನ ಜೀನ್ಸ್ ಪ್ಯಾಂಟ್ ಹಾಕ್ತೀನಿ. ರಾಬರ್ಟ್ ಸಿನಿಮಾಕ್ಕೆ ಇದೇ ರೀತಿಯ 15-20 ಜೀನ್ಸ್ ಬೇಕಾಗಿತ್ತು. ಇದಕ್ಕೆ ಒಟ್ಟಾರೆಯಾಗಿ 20 ಲಕ್ಷ ರೂಪಾಯಿ ಆಗುತ್ತದೆ. ಇದನ್ನು ಕಂಡ ದರ್ಶನ್, 4-5 ಜೀನ್ಸ್ ತಗೊಂಡು ಬನ್ನಿ ಸಾಕು. ಇನ್ನೂ ಹಾಕಿಕೊಳ್ಳದೇ ಇರುವ ಕೆಲ ಜೀನ್ಸ್ ನನ್ನ ಬಳಿ ಇವೆ. ಅವನ್ನೇ ಹಾಕಿಕೊಳ್ಳುತ್ತೇನೆ, ಇದರಿಂದ ಪ್ರೊಡಕ್ಷನ್ ಹಣ ಉಳಿತಾಯವಾಗುತ್ತದೆ. ಸುಮ್ಮನೆ ಯಾಕೆ ದುಡ್ಡು ಹಾಳು ಮಾಡುವುದು ಎಂದು ಡಿ ಬಾಸ್ ಹಣ ಉಳಿತಾಯ ಮಾಡಿದ ಪ್ರಸಂಗವನ್ನು ವಿವರಿಸಿದ್ದಾರೆ.

ಲೈಟ್ ಬಾಯ್ ಆಗಿ ಚಿತ್ರರಂಗ ಪ್ರವೇಶಿಸಿದ ಡಿ ಬಾಸ್ ಅಂದು 150 ರೂ. ಸಂಬಳ ಪಡೆಯುತ್ತಿದ್ದರು. ಇಂದು ಸ್ಯಾಂಡಲ್‍ವುಡ್‍ನ ಮೋಸ್ಟ್ ಬ್ಯುಸಿಯೆಸ್ಟ್ ನಟ. ಇದೀಗ ಲಕ್ಷಗಟ್ಟಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ವಾರಾಣಸಿಗೆ ಶೂಟಿಂಗ್‍ಗೆ ತೆರಳಿದ್ದ ವೇಳೆ ಅಲ್ಲಿ ದರ್ಶನ್ ಸಿನಿಮಾ ನೋಡಿದ್ದರು, ಅಲ್ಲಿನ ಅಭಿಮಾನಿಗಳು ಸಹ ದಾಸನನ್ನು ನೋಡಲು ಮುಗಿಬಿದ್ದಿದ್ದರಂತೆ. ಅಷ್ಟು ಫ್ಯಾನ್ಸ್ ಹೊಂದಿದ್ದಾರೆ. ಆದರೂ ದರ್ಶನ್ ಹೆಚ್ಚು ಬೆಲೆಯ ಬಟ್ಟೆ ಖರೀದಿಸುವುದಿಲ್ಲ.

ಅಷ್ಟೇ ಅಲ್ಲ ಫಾರ್ಮ್ ಹೌಸ್, ಪ್ರಾಣಿ ಪ್ರೀತಿ, ಬಡವರಿಗೆ ಸಹಾಯ ಮಾಡುವುದು ಹಾಗೂ ಸಿನಿಮಾ ರಂಗದಲ್ಲಿ ಯುವಕರಿಗೆ ಪ್ರೋತ್ಸಾಹ ನೀಡುವುದು ದರ್ಶನ್ ಅವರ ಗುಣ. ಅಲ್ಲದೆ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಅಭಿಮಾನಿಗಳು ಸಹ ಅಂದು ಹೂವು, ಹಾರ, ಕೇಕ್ ತರದೆ ಆಹಾರ ಧಾನ್ಯಗಳನ್ನು ತರುವಂತೆ ಸೂಚಿಸಿದ್ದರು. ಬಂದ ಧಾನ್ಯಗಳನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದಾನ ನೀಡುತ್ತಾರೆ ಎಂಬುದು ತಿಳಿದೇ ಇದೆ.

ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಕಿಲ್ಲರ್ ವೆಂಕಟೇಶ್‍ಗೆ 1 ಲಕ್ಷ ರೂಪಾಯಿ ನೀಡಿದ್ದು. ಡಿ ಬಾಸ್‍ಗೆ ಊಟದಲ್ಲಿ ಮಾತ್ರ ಆಸಕ್ತಿ, ರುಚಿಯಾದ ನಾನ್‍ವೆಜ್ ಅಡುಗೆ ಎಲ್ಲಿಂದ ತಂದರೂ ಓಕೆ. ಅಲ್ಲದೆ ತನ್ನ ಜೊತೆ ದುಡಿಯುವವರಿಗೆ ಸರಿಯಾದ ಸಂಬಳ ಕಾಲಕಾಲಕ್ಕೆ ಸಿಗದಿದ್ದರೆ ದರ್ಶನ್ ಸಹಿಸುವುದಿಲ್ಲ. ಶೂಟಿಂಗ್ ಸೆಟ್‍ನಲ್ಲಿ ಪ್ರತಿನಿತ್ಯ ಭರ್ಜರಿ ಊಟ ಇರಲೇಬೇಕು ಎಂಬುದು ದಚ್ಚು ಕಂಡೀಶನ್.

Share This Article
Leave a Comment

Leave a Reply

Your email address will not be published. Required fields are marked *