ಮಕ್ಕಳ ದಿನಾಚರಣೆಗೆ ವಿಶ್ ಮಾಡಿ ಅಭಿಮಾನಿಗಳಿಗೆ ದರ್ಶನ್ ಸಂದೇಶ

Public TV
1 Min Read

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಲ್ಲ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ ಒಂದು ಸಂದೇಶವನ್ನು ನೀಡಿದ್ದಾರೆ.

ದರ್ಶನ್ ಅವರು ಇಂದು ತಮ್ಮ ಟ್ವಿಟ್ಟರಿನಲ್ಲಿ ಮಕ್ಕಳ ಜೊತೆಯಿರುವ ಫೋಟೋವನ್ನು ಹಾಕಿ ಅದಕ್ಕೆ, “ಎಲ್ಲಾ ಮಕ್ಕಳಿಗೂ, ಮಕ್ಕಳ ಮನಸ್ಸುಳ್ಳವರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಬಾಲಕಾರ್ಮಿಕ ಪದ್ಧತಿಯನ್ನು ನಮ್ಮ ದೇಶದಿಂದ ನಿರ್ಮೂಲನೆ ಮಾಡಲು ಎಲ್ಲರೂ ಕೈಜೋಡಿಸಿ ಮಕ್ಕಳಿಗೆ ಉಜ್ವಲವಾದ ಭವಿಷ್ಯವನ್ನು ರೂಪಿಸಿ ಕೊಡುವಲ್ಲಿ ಸಾಧ್ಯವಾದಷ್ಟು ಶ್ರಮಿಸಬೇಕು” ಎಂದು ಟ್ವೀಟ್ ಮಾಡಿ ಶುಭ ಹಾರೈಸಿದರು.

ದರ್ಶನ್ ಅವರ ಈ ಟ್ವೀಟ್‍ಗೆ ಅಭಿಮಾನಿಗಳು,”ಹೌದು ಬಾಸ್. ಹಾಗೆಯೇ ವಾಟ್ಸಾಪ್ ನಲ್ಲಿ ಕಾಲಹರಣ ಮಾಡುವ ಯುವಸಹೃದಯಿಗಳು ವಾಟ್ಸಾಪಿನಲ್ಲಿ ಸಮಾಜ ಸೇವೆಯ ಗ್ರೂಪ್ ಮಾಡಿಕೊಂಡು ಬಡವರ ಕಣ್ಣೀರೊರೆಸುವ ಕೆಲಸ ಮಾಡಬಹುದು ಹಾಗೂ ವಿದ್ಯಾವಂತ ಬಡ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ನೀಡಿದರೆ ಬಡವರ ಮಕ್ಕಳ ಬೆನ್ನೆಲುಬಾಗಿ ನಿಲ್ಲಬಹುದು” ಎಂದು ಪ್ರತಿಕ್ರಿಯಿಸಿದರು.

ಮತ್ತೆ ಕೆಲವು ಅಭಿಮಾನಿಗಳು ಮಕ್ಕಳ ಮನಸ್ಸುಳ್ಳಂತಹ ನಿಮಗೂ ಕೂಡ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಬಾಸ್. ಬೇಗ ಯಜಮಾನನ ಅಥವಾ ದುರ್ಯೋಧನನ ಅವತಾರದಲ್ಲಿ ಬನ್ನಿ ಬಾಸ್ ಎಂದು ರೀ-ಟ್ವೀಟ್ ಮಾಡಿ ಶುಭಾಶಯ ತಿಳಿಸಿದರೆ, ಮತ್ತೊಬ್ಬರು ದರ್ಶನ್ ಅವರ ಮಗ ವಿನೀಶ್ ಅವರಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು ಎಂದು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article
Leave a Comment

Leave a Reply

Your email address will not be published. Required fields are marked *