Darshan: ‘ಡೆವಿಲ್’ ಶೂಟಿಂಗ್ ಶುರುವಾಗೋದು ಯಾವಾಗ?

Public TV
2 Min Read

ರ್ಶನ್ (Darshan) ಅಭಿನಯಿಸುತ್ತಿರೋ ಮುಂದಿನ ಚಿತ್ರ ‘ಡೆವಿಲ್’ ಫಸ್ಟ್ ಲುಕ್ ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ದಚ್ಚು ಹುಟ್ಟುಹಬ್ಬದ ದಿನ ಫ್ಯಾನ್ಸ್‌ಗೆ ಇದೊಂದು ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ‘ಡೆವಿಲ್’ನಲ್ಲಿ (Devil Film) ವಿಭಿನ್ನ ಲುಕ್‌ನಲ್ಲಿ ಕಾಣಿಸ್ಕೊಂಡಿದ್ದಾರೆ. ಹಾಗಾದ್ರೆ ಈ ಸಿನಿಮಾದ ಬ್ಲಾಕ್‌ಬಸ್ಟರ್ ಅಪ್‌ಡೇಟ್ ಏನು? ಶೂಟಿಂಗ್ ಶುರುವಾಗೋದು ಯಾವಾಗ? ಆ ಬಗ್ಗೆ ಖುದ್ದು ದರ್ಶನ್ ಬಿಚ್ಚಿಟ್ಟ ಮಾಹಿತಿ ಇಲ್ಲಿದೆ.

ದರ್ಶನ್ ಹುಟ್ಟುಹಬ್ಬದ ದಿನವೇ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ರಿವೀಲ್ ಆಯ್ತು. ಅಬ್ಬರಿಸುವ ಡೈಲಾಗ್ ಮೂಲಕ ದಚ್ಚು ಎಂಟ್ರಿ ಬಹಳ ಕುತೂಹಲಕಾರಿಯಾಗಿತ್ತು. ‘ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು’ ಎಂಬ ವಿಭಿನ್ನ ಡೈಲಾಗ್ ಹೇಳುವ ಮೂಲಕ ದರ್ಶನ್ ಉಗ್ರವಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ನಿರೀಕ್ಷೆ ದುಪ್ಪಟ್ಟಾಗಿದೆ. ಮಾರ್ಚ್‌ನಿಂದ ಚಿತ್ರೀಕರಣ ಪ್ರಾರಂಭವಾಗುವ ವದಂತಿ ಇತ್ತು. ಆದರೆ ಆಗಸ್ಟ್‌ನಿಂದ ಚಿತ್ರೀಕರಣ ಪ್ರಾರಂಭ ಎಂದಿದ್ದಾರೆ ದರ್ಶನ್.

ಆಗಸ್ಟ್ ತಿಂಗಳು ಚಿತ್ರೀಕರಣ ಅಂದರೆ ಇನ್ನೂ 5 ತಿಂಗಳು ಉಳಿಯುತ್ತೆ. ಅಷ್ಟು ತಡವಾಗಿ ಚಿತ್ರೀಕರಣ ಶುರುವಾಗ್ತಿರೋದು ಯಾಕೆ ಅನ್ನೋದೇ ಕುತೂಹಲ. ಮೂಲಗಳ ಪ್ರಕಾರ, ‘ಡೆವಿಲ್’ ಈಗ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಎನ್ನಲಾಗ್ತಿದೆ. ಹಿಂದೆ ಡೆವಿಲ್ ನಿರ್ದೇಶಕ ಮಿಲನ ಪ್ರಕಾಶ್ ಜೊತೆ ‘ತಾರಕ್’ ಮಾಡುವಾಗ ಪ್ರಕಾಶ್‌ರ ಶೂಟಿಂಗ್ ಪರಿಪೂರ್ಣತೆ ಬಗ್ಗೆ ದರ್ಶನ್ ಹಾಡಿ ಹೊಗಳಿದ್ದರು.

ಹೀಗಾಗಿ ಪ್ರಕಾಶ್ ಚಿತ್ರೀಕರಣದ ವಿಚಾರದಲ್ಲಿ ಪಕ್ಕಾ ಇರುತ್ತಾರೆ ಅನ್ನೋದಂತೂ ಸಾಬೀತಾಗಿದೆ. ಹೀಗಾಗಿ ಆಗಸ್ಟ್‌ನಲ್ಲಿ ಅಷ್ಟು ತಡವಾಗಿ ಚಿತ್ರೀಕರಣ ಶುರುವಾಗ್ತಿರೋದು ಯಾಕೆ ಅನ್ನೋದೇ ಸದ್ಯದ ಕುತೂಹಲ. ಹಾಗಾದ್ರೆ ವರ್ಷಕ್ಕೆ 2 ಸಿನಿಮಾ ನಿರೀಕ್ಷೆಯಲ್ಲಿರೋ ಫ್ಯಾನ್ಸ್ ಕಥೆಯೇನು ಹಾಗಾದ್ರೆ? ‘ಡೆವಿಲ್’ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯಬೇಕು. ಇದನ್ನೂ ಓದಿ:21 ವರ್ಷದ ಹುಡುಗಿ ಜೊತೆ 50ರ ವಯಸ್ಸಿನ ನಟನ ಮದುವೆ

ಮಿಲನ ಪ್ರಕಾಶ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ, ವೈಷ್ಣೋ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ.

ಡಿಬಾಸ್ ಕೈಯಲ್ಲಿ ಈಗ 9ಕ್ಕೂ ಹೆಚ್ಚು ಚಿತ್ರಗಳಿವೆ. ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್‌ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು (ಫೆ.16) ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.

Share This Article