ದರ್ಶನ್ ‍ಪ್ರಕರಣ ವೈಯಕ್ತಿಕ: ಡಾ.ರಾಜ್ ನೆನಪಿಸಿಕೊಂಡ ಗುರುಕಿರಣ್

Public TV
1 Min Read

ರ್ಶನ್ (Darshan) ಬಂಧನವಾಗಿ ನೂರು ದಿನಗಳ ನಂತರ ಈ ಕುರಿತಂತೆ ಮಾತಾಡಿದ್ದಾರೆ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran).  ಮಂಗಳೂರಿನಲ್ಲಿ ಮಾತನಾಡಿರೋ ಗುರುಕಿರಣ್,  ‘ರೇಣುಕಾಸ್ವಾಮಿ (Renukaswamy) ಹತ್ಯ ಪ್ರಕರಣ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿ ಆಗಿದೆ. ಸಿನಿಮಾಕ್ಕೂ ಅದಕ್ಕೂ ಸಂಬಂಧ ಇಲ್ಲ. ಸಿನಿಮಾ ನಟ ಆಗಿದಕ್ಕೆ‌ ಅದು‌ ಮಾಡಿದಲ್ಲ’ ಅಂದಿದ್ದಾರೆ.

ಸಿನಿಮಾ ರಂಗದಲ್ಲಿ ಡಾ.ರಾಜ್ ಕುಮಾರ್ ಒಂದು ಪ್ರಿನ್ಸಿಪಲ್ ಸೆಟ್ ಮಾಡಿದ್ದರು. ಇವತ್ತಿಗೂ ಎಲ್ಲರೂ ರಾಜ್ ಕುಮಾರ್ ಅವರಿಗೆ ಗೌರವ ಕೊಡ್ತಾರೆ. ಎಲ್ಲರೂ ರಾಜ್ ಕುಮಾರ್ ಆಗೋದಕ್ಕೆ ಆಗಲ್ಲ. ದರ್ಶನ್ ವಿಷಯದಲ್ಲಿ ಕೋಪ ಸ್ವಲ್ಪ ಮಿತಿ ಮೀರಿತು ಎಂದು ಅನಿಸುತ್ತೆ. ಜನರಿಗೆ ಒಳ್ಳೆಯದು ಬೇಡ ಕೆಟ್ಟದ್ದು ಬೇಕು. ಜೈಲಿಗೆ ಎಲ್ಲರನ್ನು ಭೇಟಿಯಾಗಲು ಹೋಗ್ತಾರೆ. ಆದರೆ ದರ್ಶನ್ ಮಾತ್ರ ತೋರಿಸ್ತಾರೆ ಅಷ್ಟೇ’ ಅಂದಿದ್ದಾರೆ.

ಘಟನೆ ಸಂದರ್ಭ ಅಲ್ಲಿ ಏನು ನಡೆದಿದೆ ಎಂದು ಗೊತ್ತಿಲ್ಲ. ಕಾನೂನು, ತನಿಖೆ ಮೂಲಕ‌ ಸತ್ಯ ಹೊರ ಬರುತ್ತೆ.  ಪೊಲೀಸರು ಸೆಲೆಬ್ರಿಟಿ ಎಂದು ನೋಡದೆ ಉತ್ತಮ ಕೆಲಸ ಮಾಡಿದ್ದಾರೆ. ದರ್ಶನ್ ಹೊರಗಡೆ ಬಂದ್ರೆ ನಮಗೂ ಖುಷಿ. ತಪ್ಪಿತಸ್ಥ ಅಂತಾ ಆದ್ರೆ ಈ ಮಣ್ಣಿನ ಕಾನೂನಿಗೆ ಗೌರವಿಸಬೇಕು ಎನ್ನುವುದು ಗುರುಕಿರಣ್ ಮಾತು.

Share This Article