ದರ್ಶನ್‌ಗೆ ದಿಂಬು, ಹಾಸಿಗೆ – ಪರಪ್ಪನ ಅಗ್ರಹಾರಕ್ಕಿಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯರ ಭೇಟಿ

Public TV
1 Min Read

ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗಿದೆಯೇ ಅಂತ ಪರಿಶೀಲಿಸುವಂತೆ ಕೋರ್ಟ್ ಸೂಚನೆ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಸದಸ್ಯರು ಇಂದು ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಭೇಟಿ ನೀಡಲಿದ್ದಾರೆ.

ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿದೆ. ಜೈಲಿನಲ್ಲಿ ಅಧಿಕಾರಿಗಳು ಅಗತ್ಯ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ದರ್ಶನ್ ಅರ್ಜಿ ಪುರಸ್ಕರಿಸಿದ ಕೋರ್ಟ್ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಿಗೆ ಜೈಲಿಗೆ ಭೇಟಿ ಪರಿಶೀಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

ಕೋರ್ಟ್ ಸೂಚನೆ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ ದರ್ಶನ್ ಇರುವ ಕ್ವಾರೆಂಟೈನ್ ಸೆಲ್‌ನ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ತಲೆ ದಿಂಬು, ಹಾಸಿಗೆ ನೀಡಲಾಗಿದ್ಯಾ? ಜೈಲಿನ ಮ್ಯಾನ್ಯುವಲ್ ಅಡಿ ನೀಡಲಾಗಿರುವ ವಸ್ತುಗಳು ಯವ್ಯಾವು? ಹೀಗೆ ಅಧಿಕಾರಿಗಳು ಎಲ್ಲದರ ವರದಿ ಪಡೆಯಲಿದ್ದಾರೆ.

ಆ ಬಳಿಕ ಕಾನೂನು ಸೇವಾ ಅಧಿಕಾರಿಯು ದರ್ಶನ್ ಹೇಳಿಕೆ ಪಡೆಯಲಿದ್ದಾರೆ. ಈ ವರದಿಯನ್ನು ಅ.18ರ ಒಳಗೆ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ವರದಿ ಸಿದ್ಧಪಡಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

Share This Article