ಇವರೇ ಕರ್ಕೊಂಡು ಹೋಗಿ ಹೊಡಿ ಬಡಿ ಮಾಡಿದ್ದು ತಪ್ಪು: ಪ್ರಿಯಾ ಹಾಸನ್‌

Public TV
1 Min Read

ಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದಾಗಿದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಪರ ವಿರೋಧ ಚರ್ಚೆಗಳು ಶುರುವಾಗಿವೆ. ನಟ ದರ್ಶನ್ (Darshan) ಬಗ್ಗೆ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸಿನಿಮಾ ಇಂಡಸ್ಟ್ರಿ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಈ ಬಗ್ಗೆ ನಟಿ ಹಾಗೂ ನಿರ್ಮಾಪಕಿಯಾಗಿರುವ ಪ್ರಿಯಾ ಹಾಸನ್ (Priya Hassan) ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಸುಪ್ರೀಂನಿಂದ (Supreme Court) ಬಂದ ಆದೇಶ ಇಡೀ ಸಮಾಜಕ್ಕೆ ಒಳ್ಳೆ ಮೆಸೇಜ್ ಸಿಕ್ಕಿದೆ. ಯಾರೇ ಆದರೂ ಕಾನೂನಿನ ಮುಂದೆ ಸಮಾನರು ಎನ್ನುವುದು ಮತ್ತೆ ಸಾಬೀತಾಗಿದೆ. ಪವಿತ್ರಾಗೌಡಗೆ ಮೆಸೇಜ್ ಬಂತು ನಿಜ ಒಪ್ಪಿಕೊಳ್ಳೋಣ. ಆದರೆ ಕಾನೂನು ರೀತಿಯಲ್ಲಿ ನಟ ದರ್ಶನ್ ಆಗಲಿ ಪವಿತ್ರಾ ಗೌಡ (Pavithra Gowda) ಕ್ರಮ ತೆಗೆದುಕೊಳ್ಳಬೇಕಿತ್ತು. ಅದಕ್ಕಂತಲೇ ಪೊಲೀಸ್ ಹಾಗೂ ಕಾನೂನಿತ್ತು. ಏಕಾಏಕಿ ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು ಎಂದು ಹೇಳಿದ್ದಾರೆ.

 

ರೇಣುಕಾಸ್ವಾಮಿ ಕುಟುಂಬಕ್ಕೆ ಭರವಸೆ ಸಿಕ್ಕಂತಾಗಿದೆ. ಆದರೆ ರೇಣುಕಾಸ್ವಾಮಿ ಮಾಡಿದ ತಪ್ಪನ್ನು ದರ್ಶನ್ ಅವರ ಅಭಿಮಾನಿಗಳು ಮಾಡುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಕೆಟ್ಟದಾಗಿ ಕಮೆಂಟ್ಸ್ ಮಾಡುತ್ತಿದ್ದಾರೆ ಎಂದು ದರ್ಶನ್ ಅಭಿಮಾನಿಗಳಿಗೆ ಖಡಕ್ ರಿಯಾಕ್ಷನ್ ಕೊಟ್ಟಿದ್ದಾರೆ. ನಿಮ್ ಫ್ಯಾಮಿಲಿ ಇದೆ ಅದನ್ನ ಚೆನ್ನಾಗಿ ನೋಡಿಕೊಳ್ಳಿ. ಕೆಟ್ಟದಾಗಿ ಮೆಸೇಜ್ ಮಾಡಬೇಡಿ. ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ. ರಮ್ಯಾ ಅವರಿಗೆ ಕೆಟ್ಟದಾಗಿ ಮೇಸೇಜ್ ಮಾಡಿದ್ದು ತಪ್ಪು, ರಮ್ಯಾ ಅವರ ಡೇರಿಂಗ್ ಮೆಚ್ಚಬೇಕು ಎಂದು ಹೇಳಿದ್ದಾರೆ.

ತಪ್ಪು ಮಾಡಿದವರು ಶಿಕ್ಷೆ ಅನುಭವಸಿಸಬೇಕು.. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದಿದ್ದಾರೆ. ತಪ್ಪು ಮಾಡಿದ ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಶಿಕ್ಷೆ ಅನುಭವಿಸಲೇಬೇಕೆಂದು ಹೇಳಿದ್ದಾರೆ.

Share This Article