– ಅಭಿಮಾನಿಗಳಿಗೆ ಆ ಫೀಲ್ ಬಂದ್ರೆ ತಡೆಯೋಕೆ ಆಗಲ್ಲ
ಮಂಡ್ಯ: ಬೇರೆಯವರು ಏನು ಮಾತನಾಡಿದರೂ ದರ್ಶನ್ ಹಾಗೂ ಯಶ್ ಅವರ ಪಾಪ್ಯುಲಾರಿಟಿ ಹಾಗೂ ಇಮೇಜ್ ಹಾಗೆ ಇರುತ್ತೆ. ಇವರಿಗೇನೂ ನಷ್ಟ ಆಗಲ್ಲ. ಅಭಿಮಾನಿಗಳಿಗೆ ಆ ಫೀಲ್ ಬಂದರೆ ಯಾರು ತಡೆಯಲು ಆಗಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಹೇಳಿದ್ದಾರೆ.
ಕೆ. ಆರ್ ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸುಮಲತಾ, ದರ್ಶನ್ ಹಾಗೂ ಯಶ್ ಅಭಿಮಾನಿಗಳ ಶಕ್ತಿ ಕಡೆಗಣಿಸಲು ಹೋದರೆ ತುಂಬಾ ತಪ್ಪಾಗುತ್ತೆ. ಅದರ ಪರಿಣಾಮ ಅವರ ಮೇಲೆ ಬೀಳುತ್ತೆ. ಏಕೆಂದರೆ ಕೇವಲ ಮಂಡ್ಯ ಅಷ್ಟೇ ಅಲ್ಲ, ಎಲ್ಲಾ ಕಡೆಯೂ ಈ ಪರಿಣಾಮ ಬೀರುತ್ತೆ ಎಂದರು.
ಅಲ್ಲದೆ ಈ ಮಾತುಗಳಿಂದ ದರ್ಶನ್ ಹಾಗೂ ಯಶ್‍ಗೆ ಏನು ಆಗಲ್ಲ. ಅವರ ಪಾಪ್ಯುಲಾರಿಟಿ ಹಾಗೂ ಇಮೇಜ್ ಹಾಗೆ ಇರುತ್ತೆ. ಜನ ಕೂಡ ಅವರ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತಾರೆ. ಇವರಿಗೇನೂ ನಷ್ಟ ಆಗಲ್ಲ. ಅಭಿಮಾನಿಗಳಿಗೆ ಆ ಫೀಲ್ ಬಂದರೆ(ಕೋಪ) ಯಾರು ತಡೆಯೋಕೆ ಆಗಲ್ಲ ಎಂದು ಫ್ಯಾನ್ಸ್ ಗಳ ಮೇಲೆ ಅಸಮಾಧಾನ ವ್ಯಕ್ತವಾದ ವಿಚಾರಕ್ಕೆ ಸುಮಲತಾ ಸ್ಪಷ್ಟನೆ ನೀಡಿದ್ದಾರೆ.
ಕೆ.ಆರ್ ನಗರದಲ್ಲಿ ಸುಮಲತಾ ಮಿಂಚಿನ ಪ್ರಚಾರ ನಡೆಯುತ್ತಿದೆ. ಇಂದು ನಗರದ ಜಾಮಿಯಾ ಮಸೀದಿಗೆ ಸುಮಲತಾ ಹಾಗೂ ಪುತ್ರ ಅಭಿಷೇಕ್ ಭೇಟಿ ನೀಡಿದ್ದಾರೆ. ಅಭಿಷೇಕ್ ಟೋಪಿ ಧರಿಸಿ, ಮಸಿದಿ ಒಳಗೆ ಮುಸ್ಲಿಂ ಭಾಂದವರ ಜೊತೆ ಕುಳಿತುಕೊಂಡರು. ಈ ವೇಳೆ ಸುಮಲತಾ ಮಸೀದಿ ಹೊರಗೆ ನಿಂತಿದ್ದರು.
ಅಭಿಷೇಕ್ ಮಸೀದಿಗೆ ಹೋದಾಗ ಮುಸ್ಲಿಂ ಬಾಂಧವರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ನಮಾಜ್ ನಡೆಯುತ್ತಿದ್ದ ಹಿನ್ನಲೆಯಲ್ಲಿ ಸುಮಲತಾ ಹಾಗೂ ಪುತ್ರ ಅಭಿಷೇಕ್ 10 ನಿಮಿಷಕ್ಕೂ ಹೆಚ್ಚು ಕಾಲ ಮಸೀದಿ ಹೊರಗಡೆ ಕಾದು ನಿಂತಿದ್ದರು. ಮಸೀದಿ ದ್ವಾರದ ಮುಂದೆಯೇ ನಿಂತು ಜನರ ಜೊತೆ ಮಾತುಕತೆ ನಡೆಸಿದರು. ನಮಾಜ್ ಮುಗಿದ ಬಳಿಕ ಅಭಿಷೇಕ್ ಮಸೀದಿ ಒಳಗೆ ಹೋಗಿದ್ದಾರೆ.