ದರ್ಶನ್‌ಗೆ ಯಾವಾಗ್ಲೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ: ಸುದೀಪ್

1 Min Read

ಸುದೀಪ್ (Sudeep) ಹಾಗೂ ದರ್ಶನ್ (Darshan) ಸ್ಟಾರ್‌ ವಾರ್ ನಡುವೆ ಸುದೀಪ್ ಮಾತೊಂದು ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರುವ ಕಿಚ್ಚ ಸುದೀಪ್, ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ ಎಂದಿದ್ದಾರೆ.

ಅಭಿಮಾನಿಗಳಿಗಾಗಿ ಕ್ಯೂ & ಎ ಏರ್ಪಡಿಸಿದ್ದರು ಕಿಚ್ಚ. ಈ ವೇಳೆ ಅಭಿಮಾನಿಯೊಬ್ಬರು ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಇರುವ ಫೋಟೋ ಹಾಕಿ, ಈ ಫೋಟೋ ಬಗ್ಗೆ ಒನ್ ಲೈನ್ ಆನ್ಸರ್ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕಿಚ್ಚ ‘ಅವರಿಗೆ ಸದಾ ಒಳ್ಳೆಯದನ್ನೇ ಬಯಸುತ್ತೇನೆ’ ಎಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಭಿಮಾನದ ಹೆಸರಲ್ಲಿ ಕಿರುಕುಳ ನಡೆಯಲ್ಲ – ದೂರಿನ ಬಳಿಕ ವಿಜಯಲಕ್ಷ್ಮಿ ಪೋಸ್ಟ್

ಅಸಲಿಗೆ ಸುದೀಪ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ಫ್ಯಾನ್ಸ್ವಾರ್ ಜಟಾಪಟಿ ಜೋರಾಗಿದೆ. ಈ ವೇಳೆ ಅಭಿಮಾನಿಯ ಸ್ಮಾರ್ಟ್ ಪ್ರಶ್ನೆಗೆ ಕಿಚ್ಚ ನಾಜುಕಾಗೇ ಉತ್ತರಿಸಿದ್ದಾರೆ. ಸುದೀಪ್ ಉತ್ತರಕ್ಕೆ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ದರ್ಶನ್ ಬಗ್ಗೆ ಉತ್ತಮ ಭಾವನೆಯನ್ನು ಸುದೀಪ್ ಇಟ್ಟುಕೊಂಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಹೀಗೆ, ಸ್ಟಾರ್‌ ವಾರ್ ಸಂದರ್ಭದಲ್ಲಿ ಸುದೀಪ್ ಶಾಂತ ಪ್ರತಿಕ್ರಿಯೆ ಕೊಡುವ ಮೂಲಕ ಸ್ಟಾರ್‌ ವಾರ್ ಗಲಾಟೆಯನ್ನು ಮುಗಿಸುತ್ತಾರಾ ಎಂಬ ಕುತೂಹಲ ವ್ಯಕ್ತವಾಗಿದೆ. ಆದರೆ ಸಮಯವೇ ಉತ್ತರ ಕೊಡಬೇಕು.

Share This Article