Toxic ಪೋಸ್ಟ್‌ಪೋನ್‌ ಬಳಿಕ ಲವ್ ಮಾಕ್ಟೇಲ್-3 ರಿಲೀಸ್ ಡೇಟ್ ಬದಲು

1 Min Read

ರಾಕಿಂಗ್ ಸ್ಟಾರ್ ಯಶ್ ನಟಿಸಿ, ನಿರ್ಮಿಸುತ್ತಿರುವ ಟಾಕ್ಸಿಕ್ (Toxic) ಸಿನಿಮಾದ ಬಿಡುಗಡೆ ಪೋಸ್ಟ್‌ಪೋನ್‌ ಮಾಡಿದ ಬೆನ್ನಲ್ಲೇ ಇದೀಗ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಬಹುನಿರೀಕ್ಷಿತ ಲವ್ ಮಾಕ್ಟೇಲ್-3 (Love Mocktail-3) ಸಿನಿಮಾದ ರಿಲೀಸ್ ಡೇಟ್ ಕೂಡ ಬದಲಾಗಿದೆ.

ಈ ಮೊದಲು ಲವ್ ಮಾಕ್ಟೇಲ್-3 ಸಿನಿಮಾ ಏ.10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಇದೀಗ ಡಾರ್ಲಿಂಗ್ ಕೃಷ್ಣ (Darling Krishna) ಸಿನಿಮಾ ಬಿಡುಗಡೆಯನ್ನು ಪ್ರಿ-ಪೋನ್‌ಗೊಳಿಸಿದ್ದು, ಮಾ.19ಕ್ಕೆ ರಿಲೀಸ್ ಆಗಲಿದೆ. ಟಾಕ್ಸಿಕ್ ರಿಲೀಸ್ ಡೇಟ್ ಮುಂದೂಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಡಾರ್ಲಿಂಗ್ ಕೃಷ್ಣ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಿಮ್ಮನ್ನು ರಂಜಿಸೋಕೆ ಬೇಗ ಬರಲಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ರಿಸೆಪ್ಷನ್ ಸೀರೆಯಲ್ಲಿ ಕನ್ನಡದ ಕಂಪು – ಗಂಡಭೇರುಂಡ, ಕೊಡವರ ಒಡಿಕತ್ತಿ ಕಸೂತಿ

 

View this post on Instagram

 

A post shared by Darling Krishna (@darling_krishnaa)

ಲವ್ ಮಾಕ್ಟೇಲ್-2ರ ಮುಂದುವರಿದ ಭಾಗ ಇದಾಗಿದ್ದು, ತಂದೆ ಹಾಗೂ ಮಗಳ ನಡುವಿನ ಬಾಂಧವ್ಯ, ಭಾವನಾತ್ಮಕ ಸಂಬಂಧವನ್ನು ತೋರಿಸಲಿದೆ. ಈ ಮೊದಲು ಫೆ.23ಕ್ಕೆ ರಿಲೀಸ್ ಮಾಡಲು ನಿರ್ಧರಿಸಿತ್ತು. ಆದರೆ ಬೇರೆ ಸಿನಿಮಾ ರಿಲೀಸ್‌ಗಿದ್ದ ಕಾರಣ ಮುಂದೂಡಿತ್ತು. ಇನ್ನೂ ಮಾರ್ಚ್ನಲ್ಲಿ ಟಾಕ್ಸಿಕ್ ಆಗುವುದಾಗಿ ಘೋಷಿಸಿತ್ತು. ಹೀಗಾಗಿ ಏ.10ಕ್ಕೆ ರಿಲೀಸ್ ಮಾಡಲು ನಿರ್ಧರಿಸಿತ್ತು. ಇದೀಗ ಟಾಕ್ಸಿಕ್ ಮುಂದೂಡಿದ ಕಾರಣ ಮಾ.19ಕ್ಕೆ ತೆರೆಕಾಣಲು ಸಿದ್ಧವಾಗಿದೆ.

Share This Article