ಭಾರತದ ಹಾಡಿಗೆ ಅಮೆರಿಕದ ಕುಟುಂಬದ ಡ್ಯಾನ್ಸ್ – ವೀಡಿಯೋ ವೈರಲ್

Public TV
2 Min Read

ವಾಷಿಂಗ್ಟನ್: ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರ ಜನಪ್ರಿಯವಲ್ಲ. ಇತರ ಹಲವು ದೇಶಗಳಲ್ಲಿಯೂ ಅಷ್ಟೇ ಜನಪ್ರಿಯವಾಗಿವೆ. ವಾಷಿಂಗ್ಟನ್ ನಲ್ಲಿ ಕುಟುಂಬವೊಂದು ನಮ್ಮ ಭಾರತೀಯ ಹಾಡಿಗೆ ಹೆಜ್ಜೆ ಹಾಕಿದ್ದು, ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವಿದೇಶದಲ್ಲಿ ತಂದೆ ಮತ್ತು ಮಕ್ಕಳು ನಮ್ಮ ಭಾರತ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ದೇಸಿ ಉಡುಪಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿ ಮಿಂಚಿದ್ದಾರೆ. ಬಾಲಿವುಡ್ ಹಾಡುಗಳ ಅಭಿಮಾನಿಗಳಲ್ಲಿ ಒಬ್ಬರು ವಾಷಿಂಗ್ಟನ್ ಮೂಲದ ರಿಕಿ ಎಲ್ ಪಾಂಡ್, ಕಂಟೆಂಟ್ ಕ್ರಿಯೇಟರ್ ಆಗಿದ್ದು, ಅವರು ನಿತ್ಯವೂ ಬಾಲಿವುಡ್ ಸಾಂಗ್ ಗೆ ಡ್ಯಾನ್ಸ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ರಿಕಿ ತನ್ನ ಮಗ ಮತ್ತು ಮಗಳ ಜೊತೆಯಲ್ಲಿ ನವರಾತ್ರಿಯ ವಿಶೇಷಕ್ಕೆ ಒಂದು ವೀಡಿಯೋವನ್ನ ಮಾಡಿದ್ದು, ಇನ್‍ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:  ಬಟ್ಟೆ ಒಗೆಯುವುದನ್ನು ಹೇಳಿಕೊಡುತ್ತೆ ಚಿಂಪಾಂಜಿ- ವೀಡಿಯೋ ವೈರಲ್

 

View this post on Instagram

 

A post shared by Ricky Pond (@ricky.pond)

ಈ ವೀಡಿಯೋದಲ್ಲಿ ರಿಕಿ ಪಾಂಡ್, ನೀಲಿ ಶೇರ್ವಾನಿ ಧರಿಸಿದ್ದು, ಫುಲ್ ಕಾನ್ಫಿಡೆಂಟ್ ಆಗಿ ನೃತ್ಯ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು. ನಂತರ ಅವರ ಮಗ ಕಂದು ಬಣ್ಣದ ಬಟ್ಟೆಯನ್ನು ಹಾಕಿಕೊಂಡಿದ್ದು, ಅವರ ಮಗಳು ಕಪ್ಪು ಮತ್ತು ಕಂದು ಬಣ್ಣದ ಉಡುಪಿನಲ್ಲಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ.

ಆಯುಷ್ ಶರ್ಮಾ ಮತ್ತು ವಾರಿನಾ ಹುಸೇನ್ ಅಭಿನಯದ 2018 ರ ‘ಲವ್‍ಯಾತ್ರಿ’ ಚಿತ್ರದ ‘ಚೋಗದಾ’ ಹಾಡಿಗೆ ರಿಕಿ ಮತ್ತು ಅವರ ಮಕ್ಕಳು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಈ ಹಾಡನ್ನು ದರ್ಶನ್ ರಾವಲ್ ಹಾಡಿದ್ದಾರೆ.

ಈ ವೀಡಿಯೋ ಪೋಸ್ಟ್ ಮಾಡಿದ ರಿಕಿ, ‘ಚೋಗದಾ’.. ಯಾವುದೇ ಹಾಡಿನ ಸಲಹೆಗಳಿಗಾಗಿ, ಫಾರ್ಮ್ ಅನ್ನು ಭರ್ತಿ ಮಾಡಿ. ನನ್ನ ಬಯೋದಲ್ಲಿ ಲಿಂಕ್ ಮಾಡಿ ಎಂದು ಬರೆದಿದ್ದಾರೆ. ಅಮೆರಿಕದ ವಾಷಿಂಗ್ಟನ್‍ನ ನಿವಾಸಿಯಾದ ರಿಕಿ ಪಾಂಡ್ ಇನ್‍ಸ್ಟಾಗ್ರಾಮ್‍ನಲ್ಲಿ 4 ಲಕ್ಷದ 54 ಸಾವಿರ ಫಾಲೋವರ್‍ಗಳನ್ನು ಹೊಂದಿದ್ದಾರೆ. ಇದನ್ನೂ ಓದಿ:  ಮುರುಡೇಶ್ವರ ನೇತ್ರಾಣಿಯಲ್ಲಿ ಗರಿ ಗೆದರಿದ ಸ್ಕೂಬಾ ಡೈವಿಂಗ್

ಈ ವೀಡಿಯೋ ನೋಡಿದ ವೀಕ್ಷಕರು ‘ನೃತ್ಯ ಮಾಡಲು ನನ್ನ ನೆಚ್ಚಿನ ಹಾಡುಗಳಲ್ಲಿ ಇದು ಒಂದು’, ಇನ್ನೊಬ್ಬರು ‘ಸೂಪರ್, ನವರಾತ್ರಿಯ ಹಬ್ಬದ ಸಮಯಕ್ಕೆ ಸರಿಯಾಗಿದೆ’, ‘ನೈಸ್’, ‘ಅದ್ಭುತ’, ‘ಮನಸ್ಸಿಗೆ ಮುದ ನೀಡುತ್ತೆ’ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

ಮೊದಲು 2020ರಲ್ಲಿ ಹೃತಿಕ್ ರೋಷನ್ ಅವರ ‘ಲಾಲಿಪಾಪ್ ಲಗೆಲು’ ಹಾಡಿನ ಜೊತೆ ರಿಕಿ ತನ್ನ ಮಗಳೊಂದಿಗೆ ನೃತ್ಯ ಮಾಡಿದ್ದು, ಆ ವೀಡಿಯೋ ಸಹ ಸಖತ್ ವೈರಲ್ ಆಗಿತ್ತು. ನಂತರ ಅವರು ಅನೇಕ ಬಾಲಿವುಡ್ ಹಾಡುಗಳಾದ ಓ ಬೀಟಾ ಜಿ, ಮಲ್ಹಾರಿ, ಲಂಡನ್ ತುಮಕ್ಡಾ, ದಮ್ ಡುಮಾ ದಮ್, ಚಮ್ಮಕ್ ಚಲ್ಲೊ ಮತ್ತು ಬಚ್‍ಪನ್ ಕಾ ಪ್ಯಾರ್ ಸಾಂಗ್ ಗೆ ನೃತ್ಯ ಮಾಡಿದ್ದಾರೆ. ಇದನ್ನೂ ಓದಿ:  RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ

Share This Article
Leave a Comment

Leave a Reply

Your email address will not be published. Required fields are marked *